ಮೈಸೂರು: ಇಲ್ಲಿನ ಕೆಆರ್ ಎಸ್ ರಸ್ತೆ ಸಿದ್ದರಾಮಯ್ಯ ಆರೋಗ್ಯ ರಸ್ತೆ ಎಂದು ನಾಮಕರಣ ಮಾಡುವ ವಿವಾದ ತಾರಕಕ್ಕೇರಿದೆ. ರಸ್ತೆಗೆ ಪ್ರಿನ್ಸೆಸ್ ಎಂದು ನಾಮಕರಣ ಮಾಡಿದ್ದ ಸ್ಟಿಕ್ಕರ್ ನ್ನು ಯಾರೋ ರಾತ್ರೊ ರಾತ್ರಿ ಎತ್ತಂಗಡಿ ಮಾಡಿದ್ದಾರೆ.
ಮೈಸೂರಿನ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದನ್ನು ಕೆಲವು ಸಂಘಟನೆಗಳು ಮತ್ತು ಬಿಜೆಪಿ ವಿರೋಧಿಸುತ್ತಲೇ ಇದೆ. ಮುಡಾ ಹಗರಣದಲ್ಲಿ ಕಳಂಕಿತರಾಗಿರುವ ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಡುವುದು ಸರಿಯಲ್ಲ ಎಂಬುದು ಬಿಜೆಪಿ ಮತ್ತು ಸಂಘಟನೆಗಳ ವಾದವಾಗಿದೆ.
ಈ ನಡುವೆ ಈ ರಸ್ತೆಯಲ್ಲಿ ಕೆಲವು ಭಾಗಗಳಲ್ಲಿ ನಿನ್ನೆ ಪ್ರಿನ್ಸೆಸ್ ಎಂದು ಸ್ಟಿಕ್ಕರ್ ಅಂಟಿಸಿದ್ದರು. ಆದರೆ ರಾತ್ರೋ ರಾತ್ರಿ ಸ್ಟಿಕ್ಕರ್ ತೆರವುಗಳಿಸಲಾಗಿದೆ. ಸ್ಟಿಕ್ಕರ್ ಕಿತ್ತು ಹಾಕಿರುವುದು ಯಾರು ಎಂಬ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಮೈಸೂರಿಗೆ ಸಿದ್ದರಾಮಯ್ಯ ಅನೇಕ ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರ ಹೆಸರು ಇಡುವುದರಲ್ಲಿ ತಪ್ಪೇನು ಎಂಬುದು ಕಾಂಗ್ರೆಸ್ ವಾದವಾಗಿದೆ. ಆದರೆ ಅದನ್ನು ವಿರೋಧಿಸಿ ಕೆಲವು ಸಂಘಟನೆಗಳು ಪ್ರಿನ್ಸೆಸ್ ಸ್ಟಿಕ್ಕರ್ ಅಂಟಿಸಿ ಪೂಜೆಯನ್ನೂ ಮಾಡಿದ್ದರು. ಆದರೆ ಈಗ ಸ್ಟಿಕ್ಕರ್ ತೆರವುಗೊಳಿಸಿರುವುದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.