Select Your Language

Notifications

webdunia
webdunia
webdunia
webdunia

ಮೈಸೂರಿಗೆ ಮಾತ್ರವಲ್ಲ, ಇಡೀ ಮೈಸೂರಿಗೇ ಸಿದ್ದರಾಮಯ್ಯ ಹೆಸರಿಟ್ಟರೂ ತಪ್ಪಿಲ್ಲ ಎಂದ ಮಾಜಿ ಶಾಸಕ

Siddaramaiah

Krishnaveni K

ಮೈಸೂರು , ಮಂಗಳವಾರ, 31 ಡಿಸೆಂಬರ್ 2024 (16:15 IST)
ಮೈಸೂರು: ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ವಿವಾದವಾಗುತ್ತಿರುವ ಬೆನ್ನಲ್ಲೇ ಮಾಜಿ ಶಾಸಕ ಸೋಮಶೇಖರ್ ಮೈಸೂರಿಗೇ ಸಿದ್ದರಾಮಯ್ಯ ಹೆಸರಿಟ್ಟರೂ ತಪ್ಪಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಲು ತೀರ್ಮಾನ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ರಾಜ ಮಹಾರಾಜರು ನಿರ್ಮಿಸಿದ ಮೈಸೂರಿನ ರಸ್ತೆಯೊಂದಕ್ಕೆ ಹಗರಣದಲ್ಲಿ ಕಳಂಕಿತರಾಗಿರುವ ಸಿದ್ದರಾಮಯ್ಯ ಹೆಸರು ಇಡುವುದು ಯಾಕೆ ಎಂದು ಬಿಜೆಪಿ ಮತ್ತು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಮೈಸೂರಿನಲ್ಲಿ ಮಾಜಿ ಶಾಸಕ ಎಂಕೆ ಸೋಮಶೇಖರ್ ಮೈಸೂರು ರಸ್ತೆಗೆ ಮಾತ್ರವಲ್ಲ, ಇಡೀ ಮೈಸೂರಿಗೇ ಸಿದ್ದರಾಮಯ್ಯ ಹೆಸರಿಟ್ಟರೂ ತಪ್ಪಿಲ್ಲ. ಮೈಸೂರಿಗೆ ಸಿದ್ದರಾಮಯ್ಯ ಅಷ್ಟೊಂದು ಅಭಿವೃದ್ಧಿ ಮಾಡಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ.

ಮೈಸೂರಿನ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದಕ್ಕೆ ವಿವಾದವಾಗುತ್ತಿರುವುದೇ ಅಚ್ಚರಿಯಾಗುತ್ತಿದೆ. ನಾಲ್ವಡಿ ಕೃಷ್ಣ ರಾಜ ಒಡೆಯರ್ ಆದ ಮೇಲೆ ಮೈಸೂರಿಗೆ ಇಷ್ಟೊಂದು ಅಭಿವೃದ್ಧಿ ಮಾಡಿರುವುದು ಸಿದ್ದರಾಮಯ್ಯನವರೇ. ಹೀಗಾಗಿ ಅವರ ಹೆಸರಿಟ್ಟರೆ ತಪ್ಪಿಲ್ಲ. ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಸಿದ್ದರಾಮಯ್ಯ ಅಷ್ಟು ಪ್ರಯತ್ನ ಪಟ್ಟಿದ್ದಾರೆ ಎಂದು ಸೋಮಶೇಖರ್ ಹಾಡಿ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಪಾರಿ, ಹನಿಟ್ರ್ಯಾಪ್ ವಿಷಯ ಹೊರಬರಲು ಸಿಬಿಐ ತನಿಖೆ ಅನಿವಾರ್ಯ: ಛಲವಾದಿ ನಾರಾಯಣಸ್ವಾಮಿ