Publish Date: Thu, 18 Dec 2025 (09:45 IST)
Updated Date: Thu, 18 Dec 2025 (09:48 IST)
ಬೆಂಗಳೂರು: ಅನಾರೋಗ್ಯದ ನಡುವೆಯೂ ಸಿಎಂ ಸಿದ್ದರಾಮಯ್ಯಗೆ ಇಂದು ಕೋರ್ಟ್ ತೀರ್ಪಿನ ಆತಂಕ ಎದುರಾಗಿದೆ. ಮುಡಾ ಕೇಸ್ ನಲ್ಲಿ ಇಂದು ಕೋರ್ಟ್ ಮಹತ್ವದ ತೀರ್ಪು ನೀಡಲಿದೆ.
ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳಿಗೆ ಹುರುಳಿಲ್ಲ ಎಂದು ಲೋಕಾಯುಕ್ತರು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದರು.
ಅದರ ವಿಚಾರಣೆಯನ್ನು ಮುಗಿಸಿರುವ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿದೆ. ಒಂದು ವೇಳೆ ನ್ಯಾಯಾಲಯ ಲೋಕಾಯುಕ್ತ ವರದಿಯನ್ನು ತಳ್ಳಿ ಹಾಕಿದರೆ ಸಿಎಂ ವಿರುದ್ಧ ಮತ್ತೆ ತನಿಖೆ ನಡೆಯಲಿದೆ. ಇಲ್ಲದೇ ಹೋದರೆ ಸಿಎಂಗೆ ಬಿಗ್ ರಿಲೀಫ್ ಸಿಕ್ಕಂತಾಗುವುದು.
ಸಿದ್ದರಾಮಯ್ಯನವರ ಪತ್ನಿ ಹೆಸರಿನಲ್ಲಿ 14 ಮುಡಾ ಸೈಟ್ ಅಕ್ರಮವಾಗಿ ಪಡೆಯಲಾಗಿತ್ತು ಎಂಬುದು ಆರೋಪವಾಗಿದೆ. ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ಆದರೆ ರಾಜ್ಯ ಸರ್ಕಾರದ ಅಧೀನದಲ್ಲೇ ಇರುವ ಸಂಸ್ಥೆ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿದ್ದರ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದರು.