Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯಗೆ ಏಕಾಏಕಿ ಅನಾರೋಗ್ಯ: ನಿಜವಾಗಿ ಆಗಿದ್ದೇನು ಇಲ್ಲಿದೆ ವಿವರ

Siddaramaiah
ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ನಿನ್ನೆ ಏಕಾಏಕಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಅವರಿಗೆ ನಿಜವಾಗಿ ಏನು ಸಮಸ್ಯೆಯಾಗಿದೆ ಇಲ್ಲಿದೆ ವಿವರ.

ಮೊನ್ನೆ ರಾತ್ರಿಯೇ ಸಿಎಂಗೆ ಅನಾರೋಗ್ಯ ಶುರುವಾಗಿತ್ತು. ಹಾಗಿದ್ದರೂ ನಿನ್ನೆ ಬೆಳಿಗ್ಗೆ ಸುವರ್ಣ ಸೌಧದ ಮುಂಭಾಗ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಬಳಿಕ ಅಧಿವೇಶನದಲ್ಲಿ ಭಾಗವಹಿಸಿರಲಿಲ್ಲ. ಮಧ್ಯಾಹ್ನದ ಬಳಿಕ ಸಿಎಂ ತೀರಾ ಅಸ್ವಸ್ಥರಾಗಿದ್ದರು. ಹೊಟ್ಟೆ ನೋವು ಹೆಚ್ಚಾದ ಬಳಿಕ ಅವರಿಗೆ ಸರ್ಕಿಟ್ ಹೌಸ್ ನಲ್ಲೇ ಚಿಕಿತ್ಸೆ ನೀಡಲಾಯಿತು.

ಅವರಿಗೆ ಫುಡ್ ಪಾಯಿಸನ್ ಆಗಿದೆ ಎಂದು ತಿಳಿದುಬಂದಿದೆ. ಸಿಎಂ ಅಸ್ವಸ್ಥರಾದ ಸುದ್ದಿ ತಿಳಿಯುತ್ತಿದ್ದ ಬೆನ್ನಲ್ಲೇ ಪುತ್ರ ಯತೀಂದ್ರ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ ಮೊದಲಾದವರು ಬಂದು ಆರೋಗ್ಯ ವಿಚಾರಿಸಿದ್ದಾರೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸದನದಲ್ಲಿ ಎಂದಿನ ಖದರ್ ಇಲ್ಲ, ಡಿಕೆ ಶಿವಕುಮಾರ್ ಲೆಕ್ಕಾಚಾರವೇ ಬೇರೆ