ಬೆಂಗಳೂರು: ಸಿಎಂ ಕುರ್ಚಿ ಕುಸ್ತಿ ಬಗ್ಗೆ ಕೇಳಿದ್ದಕ್ಕೆ ಸಿದ್ದರಾಮಯ್ಯ ಮಾಧ್ಯಮಗಳ ಮೇಲೆ ಗರಂ ಆದ ಘಟನೆ ಇಂದು ನಡೆದಿದೆ. ಮಾಧ್ಯಮ ಪ್ರತಿನಿಧಿ ಮೇಲೆ ಅವರು ಈ ವೇಳೆ ರೇಗಾಡಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಕಾರ್ಯಕಾರಿಣಿ ಸಭೆಯಲ್ಲಿ ಹಾಜರಾಗಲು ದೆಹಲಿಗೆ ಕರೆದಿರುವ ಕಾಂಗ್ರೆಸ್ ಹೈಕಮಾಂಡ್ ಈ ವೇಳೆ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆಯಿದೆ. ಇದರಿಂದ ರಾಜ್ಯದಲ್ಲಿ ಮತ್ತೆ ಕುರ್ಚಿ ಕದನ ತಾರಕಕ್ಕೇರಿದೆ.
ಇದರ ಬಗ್ಗೆ ಇಂದು ಮಾಧ್ಯಮಗಳು ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನೆ ಮಾಡಿವೆ. ಕರ್ನಾಟಕದಲ್ಲಿ ಯಾವಾಗಲೂ ಬರೀ ಸಿಎಂ ಕುರ್ಚಿಯದ್ದೇ ಚರ್ಚೆಯಾಗುತ್ತಿದೆ. ಇದಕ್ಕೆ ಮುಕ್ತಿಯಿಲ್ಲವೇ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದಾಗ ಸಿಎಂ ಗರಂ ಆದರು.
ನಿಮಗೆ ದಿನ ಬೆಳಗಾದರೆ ಸಿಎಂ ಕುರ್ಚಿ ಬಿಟ್ಟು ಬೇರೆ ಸುದ್ದಿ ಇಲ್ವಾ? ಎಂದು ಗರಂ ಆಗಿ ಪ್ರಶ್ನೆ ಮಾಡಿದ್ದಾರೆ. ಬಳಿಕ ಪತ್ರಕರ್ತರ ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ಗಂಟು ಮುಖ ಹಾಕಿಕೊಂಡೇ ಅಲ್ಲಿಂದ ತೆರಳಿದ್ದಾರೆ.