Select Your Language

Notifications

webdunia
webdunia
webdunia
webdunia

ಖಾಸಗಿ ಹೊಟೆಲ್ ನಲ್ಲಿ ಕಾರ್ಪೋರೇಟರ್ ಪುತ್ರನ ಗುಂಡಾಗಿರಿ

ಖಾಸಗಿ ಹೊಟೆಲ್ ನಲ್ಲಿ ಕಾರ್ಪೋರೇಟರ್ ಪುತ್ರನ ಗುಂಡಾಗಿರಿ
ಬೆಳಗಾವಿ , ಶನಿವಾರ, 12 ಅಕ್ಟೋಬರ್ 2019 (18:55 IST)
ಖಾಸಗಿ ಹೊಟೆಲ್ ವೊಂದರಲ್ಲಿ ಮಾಜಿ ಕಾರ್ಪೋರೇಟರ್ ನ ಪುತ್ರ ಗುಂಡಾಗಿರಿ ನಡೆಸಿರೋ ಘಟನೆ ಬಯಲಿಗೆ ಬಂದಿದೆ.

ಸರಿಯಾಗಿ ಸರ್ವಿಸ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ಕೆಲಸಗಾರನ ಮೇಲೆ ಮಹಾನಗರ ಪಾಲಿಕೆಯ ಮಾಜಿ‌ ಸದಸ್ಯೆಯ ಮಗ ಅಶೋಕ ಕುಮಾರ್ ಮಾಳಗಿ, ಗುಂಡಾಗಿರಿ  ಮೆರೆದು ಹಲ್ಲೆ ನಡೆಸಿದ್ದಾನೆ.  

ಬೆಳಗಾವಿ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಜಯಶ್ರೀ ಮಾಳಗಿ ಅವರ ಪುತ್ರ ಅಶೋಕ ಕುಮಾರ್ ಮಾಳಗಿ ಆ್ಯಂಡ್ ಗ್ಯಾಂಗ್ ಖಾಸಗಿ ಹೊಟೇಲ್ ಒಂದರಲ್ಲಿ ನೀರು ಕೊಡುವುದಕ್ಕೆ ತಡವಾಗಿದ್ದರಿಂದ ಕೆಲಸಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹೋಟೆಲ್ ನ ಕಿಚನ್ ಸೇರಿದಂತೆ ಎಲ್ಲ ಕಡೆ ನುಗ್ಗಿ ದಾಂಧಲೆ ಮಾಡಿ ಸರ್ವರ್ ಗಳ ಮೇಲೆ ಪ್ಲೇಟ್ ನಿಂದ ಹಲ್ಲೆ ಮಾಡಿದ್ದಾರೆ. ಶರ್ಟ್ ಬಿಚ್ಚಿಸಿ ಸಾರ್ವಜನಿಕವಾಗಿ ಕಾಲಿಗೆ ಬೀಳಿಸಿಕೊಂಡು ಅಶೋಕ್ ಮಾಳಗಿ ಗುಂಡಾ ವರ್ತನೆ ತೋರಿದ್ದಾರೆ ಎನ್ನಲಾಗಿದೆ.

ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಕ್ರಮ ತೆಗೆದುಕೊಳ್ಳಲು ಇನ್ನೂವರೆಗೂ ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ದೂರು ಕೊಡಲು ಹೋದ ಹೊಟೆನವರನ್ನು ದೂರು ತೆಗೆದುಕೊಳ್ಳದೆ ವಾಪಸ್ ಕಳಿಸಿದ್ದಾರೆ. ಮಾಜಿ ಕಾರ್ಪೊರೇಟರ್ ಮಗನ ಧಮಕಿಗೆ ಹೆದರಿದ ಹೊಟೆಲ್ ಕಾರ್ಮಿಕರು ಪ್ರಾಣ ಭಯದಲ್ಲಿ ಕೆಲಸ ತೊರೆದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಐಟಿ, ಇಡಿ, ಸಿಬಿಐ ವಿರುದ್ಧ ಸಿಡಿದೆದ್ದ ಕೈ ಪಡೆ