Daily Horoscope

Select Your Language

Notifications

webdunia
webdunia
webdunia
webdunia

ಲಂಬಾಣಿ ಡ್ರೆಸ್ ಧರಿಸಿ ಶೋಭಾ ಕರಂದ್ಲಾಜೆ ಮಸ್ತ್ ಡ್ಯಾನ್ಸ್

ಉಪ ಚುನಾವಣೆ
ಚಿಂಚೋಳಿ ಉಪಚುನಾವಣೆಯನ್ನು ಗೆಲ್ಲಲೇಬೇಕು ಎನ್ನುವ ಪಣ ತೊಟ್ಟಿರುವ ಬಿಜೆಪಿ ನಾಯಕರು ಕ್ಷೇತ್ರದಲ್ಲಿ ತಮ್ಮ ಬಿರುಸಿನ ಪ್ರಚಾರಕಾರ್ಯ ಮುಂದುವರೆಸಿದ್ದಾರೆ. 

ಕ್ಷೇತ್ರದ ಉಸ್ತುವಾರಿಗಳಾದ ಮಾಜಿ ಸಚಿವ ವಿ. ಸೋಮಣ್ಣ, ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಜೊತೆಗೂಡಿ ಸೂಗೂರು ಗ್ರಾಮದಲ್ಲಿ ಸುನೀಲ್ ವಲ್ಲಾಪುರೆ, ಅಮರನಾಥ ಪಾಟೀಲ, ಮಾಜಿ ಸಚಿವ ಶ್ರೀನಿವಾಸ್ ಪೂಜಾರಿ ಜೊತೆಗೂಡಿ ಪ್ರಚಾರ ನಡೆಸಿದರು.

ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಕಾರ ಎತ್ತದೆ ಇರುವ ಕಾಂಗ್ರೆಸ್ ನಾಯಕರು, ಕೇವಲ ವೈಯಕ್ತಿಯ ತೆಜೋವಧೆಗೆ ಇಳಿದಿದ್ದಾರೆ. ಉಮೇಶ್ ಜಾಧವ್ ಅವರು ತಮ್ಮ ಸ್ವಾಭಿಮಾನಕ್ಕಾಗಿ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚಿಂಚೋಳಿ ಕ್ಷೇತ್ರ ರಾಜ್ಯದ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ. ಖರ್ಗೆ ಅವರು ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಅಭಿವೃದ್ದಿ ಪರ ಚರ್ಚೆ ಮಾಡಿ ಎಂದರು.

webdunia
ಶೋಭಾ ಕರಂದ್ಲಾಜೆ ಪ್ರಚಾರ: ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕೂಡ್ಲೀ ಗ್ರಾಮದಿಂದ ಪ್ರಚಾರ ಕಾರ್ಯ ಪ್ರಾರಂಭಿಸಿದರು. ಲಂಬಾಣಿ ಮಹಿಳೆಯರ ಡ್ರೆಸ್ ಧರಿಸಿ ಲಂಬಾಣಿ ನೃತ್ಯದಲ್ಲಿ ಪಾಲ್ಗೊಂಡರು. ಶೋಭಾ ಮಾಡಿದ ಡ್ಯಾನ್ಸ್ ಎಲ್ಲರ ಗಮನ ಸೆಳೆಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ವಾರಕ್ಕೆ ಪತ್ನಿ ಆತ್ಮಹತ್ಯೆ, ಪತಿಯೂ ಸತ್ತ