Daily Horoscope

Select Your Language

Notifications

webdunia
webdunia
webdunia
webdunia

ವೆಬ್ ಸೀರಿಸ್ ನತ್ತ ಶಿವರಾಜ್ ಕುಮಾರ್

ವೆಬ್ ಸೀರಿಸ್
ಸಿನಿಮಾಗಳಲ್ಲಿ ಬಿಝಿಯಾಗಿರುವ ನಟ ಶಿವರಾಜ್‌ ಕುಮಾರ್‌ ವೆಬ್‌ ಸೀರಿಸ್‌ನಲ್ಲಿ ನಟಿಸಲಿದ್ದಾರೆ. ಅದು ಅವರ ಮಗಳ ನಿರ್ಮಾಣದ ವೆಬ್‌ ಸೀರಿಸ್‌ನಲ್ಲಿ.
 
ಇತ್ತೀಚೆಗೆ ಈ ಕುರಿತು ಮಾತನಾಡಿರುವ ಶಿವಣ್ಣ, “ನಾನು ಒಂದು ವೆಬ್‌ ಸೀರಿಸ್‌ನಲ್ಲಿ ನಟಿಸಲಿದ್ದೇನೆ.
 
ಅದು ನನ್ನ ಮಗಳ ನಿರ್ಮಾಣದಲ್ಲಿ. ಕೋವಿಡ್‌ ಸಮಯದಲ್ಲಿ ಮನೆಯಲಿದ್ದಾಗ ತುಂಬಾ ವೆಬ್‌ ಸೀರಿಸ್‌ಗಳನ್ನು ನೋಡಿದೆ. ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು. ಈ ತರಹನೂ ಮಾಡಬಹುದಲ್ಲ ಎಂಬ ಆಲೋಚನೆ ಬರುವಂತಹ ಕಥಾಹಂದರ ನೋಡಿ ಖುಷಿಯಾಯಿತು. ಈಗ ನನಗೂ ವೆಬ್‌ ಸೀರಿಸ್‌ನಲ್ಲಿ ನಟಿಸುವ ಮನಸ್ಸಾಗಿದೆ. ಸಿನಿಮಾಗಳ ಬಿಡುವಿನ ವೇಳೆಯಲ್ಲಿ ವೆಬ್‌ ಸೀರಿಸ್‌ ಮಾಡಬೇಕೆಂದಿದ್ದು, ಆ ಕುರಿತು ಚರ್ಚೆಯಾಗುತ್ತಿದೆ’ ಎಂದಿದ್ದಾರೆ.
 
ಸದ್ಯ ಶಿವರಾಜ್‌ಕುಮಾರ್‌ ನಟನೆಯ “ಬೈರಾಗಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಅವರದೇ ನಿರ್ಮಾಣದ “ವೇದ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸ್ಥಾನದಿಂದ ಮೋದಿಯನ್ನ ಇಳಿಸದಂತೆ ಅಡ್ವಾಣಿಗೆ ಹೇಳಿದ್ದ ಬಾಳಾಠಾಕ್ರೆ