ಬೆಂಗಳೂರು: ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ನಟ ಚೇತನ್ ಬಗ್ಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.
ನನ್ನ ಮೇಲೆ 1 ರೂ. ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದು ಟಿವಿಯಲ್ಲಿ ನೋಡಿದ್ದೇನೆ. ನನಗೆ ಇನ್ನೂ ಅಧಿಕೃತ ನೋಟಿಸ್ ಬಂದಿಲ್ಲ. ನನ್ನ ಜಾತಿಯ ಬಗ್ಗೆ ಅವಹೇಳನಕಾರಿ ಮಾತನಾಡಿದಾಗ ಖಂಡಿಸಬೇಕಾದ್ದು ನನ್ನ ಕರ್ತವ್ಯ. ಪ್ರತಿಯೊಬ್ಬರಿಗೂ ತಮ್ಮ ಜಾತಿಯ ಬಗ್ಗೆ ಪ್ರೀತಿ ಇರಲೇಬೇಕು. ಮತ್ತೊಂದು ಜಾತಿಯ ಬಗ್ಗೆ ಧ್ವೇಷವಿರಬೇಕು. ಸಂಘರ್ಷವನ್ನುಂಟು ಮಾಡಬೇಡಿ. ಚೇತನ್ ಮಾತನಾಡಿರುವುದನ್ನು ನೋಡಿದ್ದೇನೆ. ಒಬ್ಬ ಮುಖಂಡನಾಗಿ ನಾನು ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಬದ್ಧನಾಗಿದ್ದೇನೆ ಎಂದು ಸಚಿವರು ಮಾಧ್ಯಮಗಳಿಗೆ ಹೇಳಿದ್ದಾರೆ.
ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯದ ವಿರುದ್ಧ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದರ ಬಗ್ಗೆ ಅವರ ವಿರುದ್ಧ ಬ್ರಾಹ್ಮಣ ಸಂಘದಿಂದ ದೂರುಗಳೂ ದಾಖಲಾಗಿದ್ದವು. ಇದರ ನಡುವೆ ಸಚಿವರು ಚೇತನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರ ವಿರುದ್ಧ ಚೇತನ್ ಸಿವಿಲ್ ನ್ಯಾಯಾಲಯದಲ್ಲಿ 1 ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.