Publish Date: Mon, 28 Jun 2021 (14:14 IST)
Updated Date: Mon, 28 Jun 2021 (10:35 IST)
ಮೈಸೂರು: ಲಾಕ್ ಡೌನ್ ಕಟ್ಟಪಾಡುಗಳು ಸಡಿಲಗೊಂಡ ಹಿನ್ನಲೆಯಲ್ಲಿ ಇಂದಿನಿಂದ ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಬಸ್ ಆರಂಭವಾಗಿದೆ.
ಬರೋಬ್ಬರಿ 50 ದಿನಗಳ ನಂತರ ಮೈಸೂರಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭಿಸಿದೆ. ಸದ್ಯಕ್ಕೆ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಮೊದಲ ದಿನದ ಆರಂಭದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದರೂ ಸಮಯ ಕಳೆದಂತೇ ಹೆಚ್ಚಾಗುವ ನಿರೀಕ್ಷೆಯಿದೆ. ಇಂದಿನಿಂದ ಮೈಸೂರಿನಲ್ಲೂ ಅನ್ ಲಾಕ್ 2 ಜಾರಿಯಾಗಿದ್ದು, ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅವಕಾಶ ನೀಡಲಾಗಿದೆ.