ಬೆಂಗಳೂರು: ಕಳೆದ ವರ್ಷ ಲಾಕ್ ಡೌನ್ ಬಳಿಕ ಸಾರ್ವಜನಿಕರಿಗೆ ಸಾರಿಗೆ ಸಿಬ್ಬಂದಿಗಳ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ತೀವ್ರ ಸಮಸ್ಯೆಯಾಗಿತ್ತು. ಈ ವರ್ಷವೂ ಅದೇ ಪುನರಾವರ್ತನೆಯಾಗುತ್ತಿತ್ತು.
ಆದರೆ ಅಷ್ಟರಲ್ಲೇ ಸರ್ಕಾರ ನೌಕರರಿಗೆ ಶಾಕ್ ಕೊಟ್ಟಿದೆ. ಸರ್ಕಾರದ ವಿರುದ್ಧ ಜುಲೈ 5 ರಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿಯಲು ಸಿದ್ಧವಾದ ನೌಕರರಿಗೆ ಸರ್ಕಾರದ ಹೊಸ ಆದೇಶ ಬಿಸಿ ತುಪ್ಪವಾಗಿದೆ.
ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ3 ಉಪವಿಭಾಗ 1 ರ ಅನ್ವಯ ಅಗತ್ಯ ಸೇವೆಗಳ ಮುಷ್ಕರವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ನೌಕರರ ಪ್ರತಿಭಟನೆ ಯೋಜನೆಗೆ ಹಿನ್ನಡೆಯಾಗಿದೆ.