Publish Date: Sat, 26 Jun 2021 (10:01 IST)
Updated Date: Sat, 26 Jun 2021 (10:02 IST)
ಬೆಂಗಳೂರು: ಸದ್ಯಕ್ಕೆ ತಣ್ಣಗಾಗಿರುವ ಸಿಎಂ ಬದಲಾವಣೆ ವಿಚಾರ ಮತ್ತೆ ಭುಗಿಲೇಳುವ ಲಕ್ಷಣಗಳು ಕಾಣುತ್ತಿವೆ. ಸಚಿವರಾದ ಸಿಪಿ ಯೋಗೇಶ್ವರ್, ಸಿಟಿ ರವಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಕುತೂಹಲ ಮೂಡಿಸಿದೆ.
ಈ ಮೊದಲು ಯಡಿಯೂರಪ್ಪ ಆಡಳಿತ ವೈಖರಿ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮುಂದೆ ಯೋಗೇಶ್ವರ್ ಆರೋಪಗಳ ಸುರಿಮಳೆಯೇಗೈದಿದ್ದರು. ಇದೀಗ ಸಿಟಿ ರವಿ ಜೊತೆಗೆ ಕೇಂದ್ರ ನಾಯಕರನ್ನು ಭೇಟಿಯಾಗಲು ಅವರು ದೆಹಲಿಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಎಲ್ಲಾ ಶಾಸಕರು, ಸಚಿವರೊಂದಿಗೆ ಸಭೆ ನಡೆಸಿದ್ದ ಅರುಣ್ ಸಿಂಗ್ ಇಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ವರಿಷ್ಠರಿಗೆ ವರದಿ ನೀಡಿದ್ದರು. ಇದರ ಪರಿಣಾಮ ಇನ್ನಷ್ಟೇ ಹೊರಬರಬೇಕಿದೆ. ಅದರ ನಡುವೆಯೇ ಇಬ್ಬರೂ ಸಚಿವರ ದೆಹಲಿ ಭೇಟಿ ಮತ್ತೊಮ್ಮೆ ಸಿಎಂ ಬದಲಾವಣೆ ಫೈಟ್ ಗೆ ಕಾರಣವಾಗುತ್ತಾ ಕಾದು ನೋಡಬೇಕಿದೆ.