Select Your Language

Notifications

webdunia
webdunia
webdunia
webdunia

ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಶಿವಕುಮಾರ್‌

DKC

Sampriya

ಬೆಂಗಳೂರು , ಬುಧವಾರ, 14 ಆಗಸ್ಟ್ 2024 (18:07 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂಬ ಊಹಾಪೋಹ ಜೋರಾಗಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಬದಲಾವಣೆ ಮಾಡುವುದಿಲ್ಲ ಮತ್ತು ಕತ್ತರಿ ಹಾಕುವುದಿಲ್ಲ  ಎಂದು ಸ್ಪಷ್ಟಣೆಯನ್ನು ನೀಡಿದರು.

ಪದ್ಮನಾಭನಗರದಲ್ಲಿ ಗ್ಯಾರಂಟಿ ಅನುಷ್ಠಾನ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಲಾಗುತ್ತದೆ ಎಂಬ ಸುದ್ದಿ ಹರಡಿಸಲಾಗುತ್ತಿದೆ. ಆದರೆ ಇದೆಲ್ಲ ಸುಳ್ಳಾಗಿದ್ದು, ಪಕ್ಷದ ಅಧ್ಯಕ್ಷನಾಗಿ ನಾನು ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂಬ ಭರವಸೆಯನ್ನು ನೀಡುತ್ತೇನೆ ಎಂದರು.

ಇನ್ನೂ ಕೆಲವರು ಆದಾಯ ಹೆಚ್ಚಿದ್ದರು, ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಅವುಗಳನ್ನು ನಾವು ಪರಿಶೀಲನೆ ಮಾಡುತ್ತೇವೆ. ಶಾಸಕರಿಗೆ, ಸಚಿವರಿಗೆ ಅನುದಾನ ಸಿಗುತ್ತಿಲ್ಲ ಎನ್ನುವುದು ಸುಳ್ಳು ಎಂದರು.

ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರದ ಬೊಕ್ಕಸದಲ್ಲಿ ಏನಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯವನ್ನು ನಡೆಸಲಾಗುತ್ತಿಲ್ಲ, ಶಾಸಕರಿಗೆ, ಸಚಿವರಿಗೆ ಅನುದಾನ ಸಿಗುತ್ತಿಲ್ಲ. ಇದರಿಂದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂಬ ಊಹಾಪೋಹ ಜೋರಾಗಿ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಂಗಭದ್ರಾ ಡ್ಯಾಂಗೆ ಗೇಟ್‌ ಆಳವಡಿಕೆ ಕೆಲಸಕ್ಕೂ ಮುನ್ನಾ ಸಚಿವ ಜಮೀರ್ ಅಹ್ಮದ್ ಪೂಜೆ