Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯರಿಗೆ ಕಿಂಚಿತ್ತಾದರೂ ಮಾನವೀಯತೆ ಇಲ್ಲವೇ: ಆರ್‌ ಅಶೋಕ್ ಪ್ರಶ್ನೆ

ಸಿದ್ದರಾಮಯ್ಯರಿಗೆ ಕಿಂಚಿತ್ತಾದರೂ ಮಾನವೀಯತೆ ಇಲ್ಲವೇ: ಆರ್‌ ಅಶೋಕ್ ಪ್ರಶ್ನೆ

Sampriya

ಬೆಂಗಳೂರು , ಸೋಮವಾರ, 12 ಆಗಸ್ಟ್ 2024 (15:24 IST)
ಬೆಂಗಳೂರು: ರಾಜ್ಯದಲ್ಲಿರುವ ದಲಿತರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಸುರಕ್ಷಿತ ಮತ್ತು ಗೌರವಯುತ ಬದುಕಿನ ಗ್ಯಾರೆಂಟಿ ಯಾವಾಗ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯಗೆ  ವಿಪಕ್ಷ ನಾಯಕ ಆರ್‌ ಅಶೋಕ್ ಪ್ರಶ್ನಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿರುವ ದಲಿತರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಸುರಕ್ಷಿತ ಮತ್ತು ಗೌರವಯುತ ಬದುಕಿನ ಗ್ಯಾರೆಂಟಿ ಯಾವಾಗ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯಗೆ  ವಿಪಕ್ಷ ನಾಯಕ ಆರ್‌ ಅಶೋಕ್ ಪ್ರಶ್ನಿಸಿದ್ದಾರೆ.

ಈಚೆಗೆ ಚಿಕ್ಕಬಳ್ಳಾಪುರ ತಾಲ್ಲೂಕಿ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡಾಚಾರ ಹಳ್ಳಿ ಅಂಗನವಾಡಿ ಕೇಂದ್ರ ಮಕ್ಕಳಿಗೆ ನೀಡಿದ ಆಹಾರದಲ್ಲಿ ಸತ್ತ ಇಲಿಯ ಅವಶೇಷ ಪತ್ತೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ ಎಕ್ಸ್‌ನಲ್ಲಿ ಫೋಸ್ಟ್ ಹಂಚಿಕೊಂಡಿದ್ದಾರೆ.  

ಅಂಗನವಾಡಿ ಆಹಾರದಲ್ಲಿ ಸತ್ತ ಇಲಿ!

ಮಾಲೂರಿನ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗಿಳಿಸಿದ್ದಾಯ್ತು, ಯಶವಂತಪುರ ವಿಧಾನಸಭೆ ಕ್ಷೇತ್ರದ ಅಂದ್ರಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದಲೇ ಶೌಚಾಲಯ ಶುಚಿಗೊಳಿಸಿದ್ದಾಯ್ತು, ಪರೀಕ್ಷೆ ಬರೆಯಲು ಹೋಗಬೇಕಿದ್ದ ಮಕ್ಕಳನ್ನ ಲಗೇಜು ವಾಹನದಲ್ಲಿ ಕುರಿ ಮಂದೆಯಂತೆ ಸಾಗಿಸಿದ್ದಾಯ್ತು, ಈಗ ಬಾಗೇಪಲ್ಲಿ ತಾಲ್ಲೂಕಿನ ಗರುಡಾಚಾರಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾದ ಆಹಾರದಲ್ಲಿ ಸತ್ತ ಇಲಿಯ ಅವಶೇಷ ಪತ್ತೆಯಾಗಿದೆ.

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ಮುಖ್ಯಮಂತ್ರಿಗಳಿಗಾಗಲಿ, ಸಚಿವರಿಗಾಗಲಿ ಯಾವುದೇ ಇಲಾಖೆಗಳ ಮೇಲೆ, ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದಂತಹ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿಎಂ ಸಿದ್ದರಾಮಯ್ಯನವರೇ, ಗ್ರಾಮೀಣ ಪ್ರದೇಶದ ಬಡ ಕುಟುಂಬದ ಮುಗ್ಧ ಕಂದಮ್ಮಗಳಿಗೆ ಸತ್ತ ಇಲಿಯ ಅವಶೇಷವಿರುವ ಆಹಾರ ನೀಡಿ ವಿಷ ಹಾಕುತ್ತಿದ್ದೀರಲ್ಲ, ನಿಮಗೆ ಕಿಂಚಿತ್ತಾದರೂ ಮಾನವೀಯತೆ ಇಲ್ಲವೇ? ಇದೇನಾ ನಿಮ್ಮ ಸಾಮಾಜಿಕ ನ್ಯಾಯ?

ರಾಜ್ಯದ ದಲಿತರು, ಹಿಂದುಳಿದವರು, ಮಹಿಳೆಯರು, ಮಕ್ಕಳಿಗೆ ಸುರಕ್ಷಿತ ಮತ್ತು ಗೌರವಯುತ ಬದುಕಿನ ಗ್ಯಾರೆಂಟಿ ಯಾವಾಗ ಸಿಗಲಿದೆ ಮುಖ್ಯಮಂತ್ರಿಗಳೇ? ಬಹುಶಃ ತಾವು ಅಧಿಕಾರದಲ್ಲಿ ಇರುವವರೆಗೂ ಸಿಗುವುದಿಲ್ಲ. ದಯವಿಟ್ಟು ರಾಜೀನಾಮೆ ಕೊಟ್ಟು ತೊಲಗಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಬೆಂಗಳೂರಿನ ಈ ಎಲ್ಲ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ