Select Your Language

Notifications

webdunia
webdunia
webdunia
webdunia

ತುಂಗಭದ್ರಾ ಡ್ಯಾಂಗೆ ಗೇಟ್‌ ಆಳವಡಿಕೆ ಕೆಲಸಕ್ಕೂ ಮುನ್ನಾ ಸಚಿವ ಜಮೀರ್ ಅಹ್ಮದ್ ಪೂಜೆ

Tungabhadre Dam

Sampriya

ಕೊಪ್ಪಳ , ಬುಧವಾರ, 14 ಆಗಸ್ಟ್ 2024 (16:48 IST)
Photo Courtesy X
ಕೊಪ್ಪಳ:  ಜಿಲ್ಲೆಯ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ ಕೊಚ್ಚುಹೋಗಿರುವ 189ನೇ ಕ್ರಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ನಿರ್ಮಾಣಕ್ಕೂ ಮುನ್ನಾ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪೂಜೆ ಸಲ್ಲಿಸಿದರು.

19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದು ಅದರ ರಿಪೇರಿ ಕೆಲಸಕ್ಕೆ ಇಂದು ಬುಧವಾರ ಪೂಜೆ ನೆರವೇರಿಸುವ ಮೂಲಕ ಕೆಲಸಕ್ಕೆ ಚಾಲನೆ ನೀಡಲಾಯಿತು.

ಹೊಸ ಕ್ರೆಸ್ಟ್ ಗೇಟ್ ಅಳವಡಿಸುವ ಕಾಮಗಾರಿ ಇಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಆರಂಭವಾಗಿದೆ. ಕಳೆದ ಭಾನುವಾರ 19ನೇ ಕ್ರಸ್ಟ್ ಗೇಟ್ ಮುರಿದಿತ್ತು.

ಇನ್ನೂ ಗೇಟ್ ರಿಪೇರಿ ಮಾಡಲು ಅಣೆಕಟ್ಟಿನ ನೀರನ್ನು ಹಂತ ಹಂತವಾಗಿ ಹೊರಗಡೆ ಬಿಡುತ್ತಿದ್ದಾರೆ.  ಡ್ಯಾಂ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ನದಿ ಪಾತ್ರದ ಜನರು ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಹಾಗೂ ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಟಿಬಿ ಬೋರ್ಡ್ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ಸಮೀಪಕ್ಕೆ ಮಕ್ಕಳನ್ನು, ಜಾನುವಾರುಗಳು ಹೋಗದಂತೆ ಎಚ್ಚರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತರಗತಿಯಲ್ಲಿ ಫೇಲ್ ಮಾಡುವುದಾಗಿ ಹೆದರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ