Select Your Language

Notifications

webdunia
webdunia
webdunia
webdunia

`ಹಿರಿಯರಾದರೆ ಸಾಲದು, ಬುದ್ಧಿಯೂ ಬೆಳೆದಿರಬೇಕು’

`ಹಿರಿಯರಾದರೆ ಸಾಲದು, ಬುದ್ಧಿಯೂ ಬೆಳೆದಿರಬೇಕು’
ಬೆಂಗಳೂರು , ಶನಿವಾರ, 14 ಅಕ್ಟೋಬರ್ 2017 (16:43 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಸಭ್ಯ ಪದ ಬಳಸಿ ನಿಂದಿಸಿರುವ ಸಚಿವ ರೋಷನ್‌ ಬೇಗ್‌ ವಿರುದ್ಧ ಬಿಜೆಪಿ ನಾಯಕಿ, ಗಣೇಶ್ ಪತ್ನಿ ಶಿಲ್ಪಾ ಗಣೇಶ್ ವಾಗ್ದಾಳಿ ನಡೆಸಿದ್ದಾರೆ.

ಟ್ವಿಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿರುವ ಶಿಲ್ಪಾ, 'ಬೇರೊಬ್ಬರ ಕಡೆ ಒಂದು ಬೆರಳು ತೋರಿಸಿದರೆ ಉಳಿದ ಬೆರಳುಗಳು ನಮ್ಮನ್ನೇ ತೋರಿಸುತ್ತವೆ, ರೋಷನ್ ಬೇಗ್ ಅವರೇ ಬರೀ ವಯಸ್ಸಿನಲ್ಲಿ ಹಿರಿಯರಾದರೆ ಸಾಲದು, ಬುದ್ಧಿಯೂ ಬೆಳೆದಿರಬೇಕು' ಎಂದು ಟ್ವೀಟ್ ಮಾಡಿದ್ದಾರೆ.
webdunia

ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವ ರೋಷನ್‌ ಬೇಗ್‌ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಟ್ಟ ಭಾಷೆ ಬಳಸಿ ಮಾತನಾಡಿದ್ದರು. ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ರೋಷನ್‌ ಬೇಗ್‌ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಚುನಾವಣೆ ಆಯೋಗ ಹಲ್ಲಿಲ್ಲದ ಹುಲಿ: ವರುಣ್ ಗಾಂಧಿ