Select Your Language

Notifications

webdunia
webdunia
webdunia
webdunia

ಜಿಎಸ್‌ ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ. ಸಿದ್ದರಾಮಯ್ಯ ರಾಜೀನಾಮೆ

ಜಿಎಸ್‌ ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ. ಸಿದ್ದರಾಮಯ್ಯ ರಾಜೀನಾಮೆ
bangalore , ಸೋಮವಾರ, 30 ಮೇ 2022 (19:15 IST)
ಜಿಎಸ್‌ ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಎಸ್‌.ಜಿ. ಸಿದ್ದರಾಮಯ್ಯ ರಾಜೀನಾಮೆ
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಹಲವು ದಿನಗಳಿಂದ ವಿವಾದಕ್ಕೀಡಾಗಿದೆ. ಪಠ್ಯದಲ್ಲಿ ಕೋಮು ರಾಜಕೀಯ, ಬ್ರಾಹ್ಮಣೀಕರಣವಾಗಿದೆ ಎಂದೆಂದೂ ಹಲವು ದಿನಗಳಿಂದ ನಾಡಿನ ಅನೇಕ ಜನರು ವಿರೋಧ ವ್ಯಕ್ತಪಡಿಸಿ ಹಲವು ಸಾಹಿತಿಗಳು ಪಠ್ಯದಲ್ಲಿ ತಮ್ಮ ಲೇಖನವನ್ನು ಹಿಂತೆಗೆದುಕೊಳ್ಳುವುದಾಗಿ ಪತ್ರ ಬರೆದಿದ್ದಾರೆ.
ಪಠ್ಯ ಕ್ರಮ, ಪರಿಷ್ಕರಣೆ ರೀತಿ ಅಸಂವಿಧಾನಿಕ ಮತ್ತು ಬ್ರಾಹ್ಮಣಿಕರಣ ಎಂದೇಳಿ ಹಿರಿಯ ಸಾಹಿತಿ ದೇವನೂರು ಮಹಾದೇವ ಮತ್ತು ಜಿ ರಾಮಕೃಷ್ಣ ಅವರು ಪಠ್ಯದಿಂದ ತಮ್ಮ ಲೇಖನವನ್ನು ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಈಗ ರಾಷ್ಟ್ರ ಕವಿ ಡಾ. ಜಿಎಸ್ ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಮತ್ತವರ ಸದಸ್ಯರು ತಮ್ಮ ಸ್ಥಾನಕ್ಕೆ ಇಂದು ಸೋಮವಾರ ಸಿಎಂ ಬೊಮ್ಮಾಯಿಗೆ ರಾಜಿನಾಮೆ ನೀಡಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ನಮ್ಮ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಸಂಸ್ಕೃತಿ, ಸಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಸಂವಿಧಾನಿಕ ದಬ್ಬಾಳಿಕೆಗಳನ್ನು ಕಂಡು ಆತಂಕ ಭಯ ಉಂಟಾಗಿದೆ. ಕೋಮುದ್ವೇಷವನ್ನು ರಾಜಾರೋಷವಾಗಿ ಮಾತನಾಡುತ್ತಾ ಆಟಾಟೋಪ ಮರೆಯುತ್ತಾ ಪ್ರಜಾಪ್ರಭುತ್ವ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಮೌನವಹಿಸೊರುವುದು ಇನ್ನೂ ಹೆಚ್ಚಿನ ಆತಂಕ ಭಯ ಉಂಟು ಮಾಡಿದರು.
ಇದೆಲ್ಲ ಬೆಳವಣಿಗೆಗಳಿಂದ ಬೇಸತ್ತು ನಾವುಗಳು ರಾಷ್ಟ್ರೀಯ ಡಾ. ಜಿ.ಎಸ್ ಶಿವರುದ್ರಪ್ಪ ಪ್ರತಿಷ್ಠಾನ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸದಸ್ಯ ಸ್ಥಾನಗಳಿಗೆ ರಾಜಿನಾಮೆ ನೀಡಲಾಗುವುದು. ಮಾನ್ಯ ಮುಖ್ಯಮಂತ್ರಿಗಳು ನಮ್ಮ ರಾಜಿನಾಮೆಯನ್ನು ಒಪ್ಪಿ ಈ ಕೂಡಲೇ ಕಾರ್ಯಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ವಿನಂತಿಸುತ್ತೇವೆ. ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಜಿ ಸಿದ್ದರಾಮಯ್ಯ ಸದಸ್ಯರಾದ ಎಚ್.ಎಸ್.ರಾಘವೇಂದ್ರ ರಾವ್, ಡಾ. ಚಂದ್ರಶೇಖರ್ ನಂಗಲಿ ಮತ್ತು ಡಾ. ನಟರಾಜ್ ಬೂದಾಳು ಸಹಿ ಹಾಕಿ ರಾಜಿನಾಮೆ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಪಿಎಸ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಶ್ರುತಿ ಶರ್ಮ ನಂ.1 ರ್ಯಾಂಕ್