Select Your Language

Notifications

webdunia
webdunia
webdunia
Tuesday, 8 April 2025
webdunia

ದೇಶದಲ್ಲಿ ಒಮಿಕ್ರಾನ್ ಭೀತಿ: ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 949 ಅಂಕ ಕುಸಿತ

ದೇಶದಲ್ಲಿ ಒಮಿಕ್ರಾನ್ ಭೀತಿ
bangalore , ಮಂಗಳವಾರ, 7 ಡಿಸೆಂಬರ್ 2021 (20:08 IST)
ದೇಶದಲ್ಲಿ ಕೊರೋನಾ ರೂಪಾಂತರ ವೈರಸ್ ಒಮಿಕ್ರಾನ್ ಆತಂಕ ಮುಂಬೈ ಷೇರುಪೇಟೆಗೆ ಭಾರಿ ಹೊಡೆತ ನೀಡಿದ್ದು, ವಾರದ ಆರಂಭದ ದಿನವಾದ ಇಂದು ದಿನದಾಂತ್ಯಕ್ಕೆ ಸೆನ್ಸೆಕ್ಸ್‌ 949 ಅಂಕಗಳ ನಷ್ಟ ಅನುಭವಿಸಿದೆ. 56,747ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇತ್ತ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 284 ಅಂಕಗಳ ಪತನದ ಬಳಿಕ 16,912ಕ್ಕೆ ಇಳಿದಿದೆ.
ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾ ಹಿನ್ನೆಲೆ ಭಾರತೀಯ ಷೇರುಗಳಲ್ಲಿ ಕುಸಿತ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂಡಸ್‌ಇಂಡ್ ಬ್ಯಾಂಕ್ ಹೆಚ್ಚು ನಷ್ಟ ಹೊಂದಿದ ಕಂಪನಿಗಳ ಪೈಕಿ ಅಗ್ರಸ್ಥಾನದಲ್ಲಿತ್ತು.ಈ ಬ್ಯಾಂಕ್‌ ಶೇ.4ರಷ್ಟು ಕುಸಿತ ಕಂಡಿದೆ. ಬಜಾಜ್ ಫಿನ್‌ಸರ್ವ್, ಭಾರ್ತಿ ಏರ್‌ಟೆಲ್, ಟಿಸಿಎಸ್, ಹೆಚ್‌ಸಿಎಲ್ ಹಾಗೂ ಟೆಕ್ ಮಹೀಂದ್ರಾ ನಂತರದ ಸ್ಥಾನದಲ್ಲಿವೆ.
ದಿನದ ಆರಂಭದಿಂದಲೇ ಎಲ್ಲಾ ವಲಯಗಳ ಷೇರುಗಳು ನಷ್ಟದಲ್ಲಿ ಸಾಗಿದವು.ಮಧ್ಯಾಹ್ನದ ವಹಿವಾಟಿನ ಸಮಯದಲ್ಲಿ ಮಾರಾಟ ಮತ್ತಷ್ಟು ತೀವ್ರಗೊಂಡಾಗ ಸಂಜೆಯ ವೇಳೆಗೂ ಸೂಚ್ಯಂಕ ಪತನದಲ್ಲೇ ಅಂತ್ಯ ಕಂಡಿವೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್ ರಂಗನಾಥನ್ ವಿವರಿಸಿದರು.
ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 30 ಪೈಸೆ ಕುಸಿತಗೊಂಡ ಬಳಿಕ 75.42 ರೂಪಾಯಿಯಲ್ಲಿ ವ್ಯವಹಾರ ನಡೆಸಿದೆ. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 2.23 ಶೇಕಡಾ ಏರಿಕೆಯಾಗಿ 71.44 ಡಾಲರ್‌ಗೆ ಮಾರಾಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

1,300 ಎಕರೆ ಸರಕಾರದ ವಶಕ್ಕೆ: ವೀರಾಜಪೇಟೆ ಸಿವಿಲ್ ನ್ಯಾಯಾಲಯ ಆದೇಶ