Select Your Language

Notifications

webdunia
webdunia
webdunia
webdunia

ಒಮಿಕ್ರಾನ್ ಭೀತಿ: ತಜ್ಞರ ಸಲಹೆಯಂತೆ ಮುಂದುವರಿಯುವೆ ಎಂದ ಸಿಎಂ ಬೊಮ್ಮಾಯಿ

ಒಮಿಕ್ರಾನ್ ಭೀತಿ: ತಜ್ಞರ ಸಲಹೆಯಂತೆ ಮುಂದುವರಿಯುವೆ ಎಂದ ಸಿಎಂ ಬೊಮ್ಮಾಯಿ
bangalore , ಸೋಮವಾರ, 6 ಡಿಸೆಂಬರ್ 2021 (20:24 IST)
ಕೊರೋನಾ ಮುಂಜಾಗ್ರತಾ ಕ್ರಮವಾಗಿ ಹಲವಾರು ಸಲಹೆಗಳು ಬರುತ್ತಿವೆ. ಎಲ್ಲವನ್ನು ತಜ್ಞರ ಮುಂದೆ ಇಟ್ಟು ಅವರ ಸೂಚನೆ ಮೇರೆಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಒಮಿಕ್ರಾನ್ ಮತ್ತು ಡೆಲ್ಟಾಗಳು ಪ್ರಾಥಮಿಕ ಹಂತದಲ್ಲಿದ್ದು,ತಜ್ಞರ ಸಲಹೆಯನ್ನು ಆಧರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವು ಎಂದು ಸಿನಿಮಾ ಮಂದಿರ ಮತ್ತು ಮಾಲ್ ಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಅವಕಾಶದ ಸಲಹೆ ಬರುತ್ತಿವೆ ಎಂಬ ಪ್ರಶ್ನೆ ಪ್ರತಿಕ್ರಿಯಿಸಿದರು.
ಸಚಿವ ಸಂಪುಟದ ಕುರಿತು: ವಿಧಾನ ಪರಿಷತ್ ಚುನಾವಣೆ ಮತ್ತು ಅಧಿವೇಶನ ನಮ್ಮ ಮುಂದೆ ಇದೆ. ಆದಾದ ಬಳಿಕ ಹೈಕಮಾಂಡ್ ನಿರ್ಧಾರ ಆಧರಿಸಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದರು.
ಜೆಡಿಎಸ್ ಜೊತೆ ಮೈತ್ರಿಯ ಬಗ್ಗೆ ಯಾರು ಗೊಂದಲ ಹೇಳಿಕೆ ನೀಡಿಲ್ಲ. ಈ ವಿಚಾರವಾಗಿ ಜೆಡಿಎಸ್ ನಾಯಕ ಎಚ್.ಡಿ‌. ಕುಮಾರಸ್ವಾಮಿಯನ್ನು ಕೇಳಿ ಎಂದು ಹೇಳಿದರು.
ಡಿ.ಕೆ ಶಿವಕುಮಾರ ಎಲ್ಲ ಹೇಳಿಕೆಗೆ ನಾನು ಪ್ರತಿಕ್ರಿಯೆ ನಿಡಬೇಕು ಎಂದಿನಿಲ್ಲ ಎಂದು ಡಿಕೆ ಶಿವಕುಮಾರ ಬಿಜೆಪಿ ಸೇರದೆ ಇರುವುದಕ್ಕೆ ಜೈಲಿಕೆ ಹಾಕಿಸಿದರು ಎಂಬ ಮಾಧ್ಯಮದವರ ಪ್ರಶ್ನೆ ಹೀಗೆ ಉತ್ತರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡಿದ್ದರೆ ಒಮಿಕ್ರಾನ್ ತೀವ್ರತೆ ಕಡಿಮೆ