Select Your Language

Notifications

webdunia
webdunia
webdunia
webdunia

ಒಮಿಕ್ರಾನ್ ಮರುಸೋಂಕಿನ ಅಪಾಯ ಹೆಚ್ಚು!

ಒಮಿಕ್ರಾನ್ ಮರುಸೋಂಕಿನ ಅಪಾಯ ಹೆಚ್ಚು!
ಸಿಂಗಾಪುರ್ , ಸೋಮವಾರ, 6 ಡಿಸೆಂಬರ್ 2021 (12:34 IST)
ಸಿಂಗಾಪುರ್ :  ಜಾಗತಿಕವಾಗಿ ಆರಂಭಿಕ ಕ್ಲಿನಿಕಲ್ ಅವಲೋಕನಗಳು ಕೊವಿಡ್ 19 ಒಮಿಕ್ರಾನ್ ರೂಪಾಂತರವು ಹೆಚ್ಚು ಹರಡಬಹುದು ಎಂಬುದಾಗಿ ತೋರಿಸಿವೆ ಎಂದು  ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ .
ಇದು ಕೊರೊನಾ ವೈರಸ್ನ ಡೆಲ್ಟಾ ಮತ್ತು ಬೀಟಾ ರೂಪಾಂತರಗಳಿಗೆ ಹೋಲಿಸಿದರೆ ಮರುಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಸೂಚಿಸುತ್ತದೆ ಎಂದು ಹೇಳಿದೆ. “ಇದರರ್ಥ ಕೊವಿಡ್19 ನಿಂದ ಚೇತರಿಸಿಕೊಂಡ ವ್ಯಕ್ತಿಗಳು ಒಮಿಕ್ರಾನ್ ರೂಪಾಂತರದೊಂದಿಗೆ ಮರುಸೋಂಕಿಗೆ ಒಳಗಾಗುವ ಹೆಚ್ಚಿನ ಸಾಧ್ಯತೆ   ಇದೆ ಎಂದು ಸಚಿವಾಲಯವು ಭಾನುವಾರ ಹೇಳಿರುವುದಾಗಿ ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.
ಏತನ್ಮಧ್ಯೆ, ನಗರವು ಭಾನುವಾರದಂದು ಮತ್ತೊಂದು “ಪ್ರಾಥಮಿಕವಾಗಿ ಧನಾತ್ಮಕ” ಒಮಿಕ್ರಾನ್ ಪ್ರಕರಣವನ್ನು ವರದಿ ಮಾಡಿದೆ. ಡಿಸೆಂಬರ್ 1 ರಂದು ದಕ್ಷಿಣ ಆಫ್ರಿಕಾದಿಂದ ಇಲ್ಲಿಗೆ ಬಂದಿಳಿದ ಇತರ ಎರಡು “ಪ್ರಾಥಮಿಕ ಧನಾತ್ಮಕ” ಪ್ರಕರಣಗಳಂತೆಯೇ 37 ವರ್ಷದ ಲಸಿಕೆ ಪಡೆದ ಖಾಯಂ ನಿವಾಸಿ ಅದೇ ವಿಮಾನದಲ್ಲಿದ್ದರು. ಭಾನುವಾರ ಸಿಂಗಾಪುರದಲ್ಲಿ 552 ಹೊಸ ಕೊವಿಡ್ ಪ್ರಕರಣಗಳು ಮತ್ತು 13 ಸಾವುಗಳು ಸಂಭವಿಸಿದೆ.
ಕಳೆದ ಹಲವಾರು ದಿನಗಳಿಂದ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳ ವರದಿಗಳನ್ನು ಪರಿಶೀಲಿಸಿದ್ದು ಪೀಡಿತ ದೇಶಗಳಲ್ಲಿನ ತಜ್ಞರಿಂದ ಮೊದಲ ಮಾಹಿತಿಯನ್ನು ಪಡೆಯಲು ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಸಚಿವಾಲಯ ಹೇಳಿದೆ. “ಈ ಪತ್ರಿಕಾ ಪ್ರಕಟಣೆಯು ಒಮಿಕ್ರಾನ್ ರೂಪಾಂತರದ ಬಗ್ಗೆ ನಮ್ಮ ತಿಳುವಳಿಕೆಯನ್ನು ನವೀಕರಿಸುತ್ತದೆ.  ಅನೇಕ ಪ್ರಶ್ನೆಗಳು ಸ್ಪಷ್ಟ ಉತ್ತರಗಳಿಲ್ಲದೆ ಉಳಿದಿವೆ” ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಿ ಮಾಲ್ಗೆ ಮತ್ತೆ ಬಿತ್ತು ಬೀಗ!