Publish Date: Tue, 08 Sep 2020 (23:04 IST)
Updated Date: Tue, 08 Sep 2020 (23:05 IST)
ರಾಜ್ಯದ ಹಿರಿಯ ಸಾಹಿತಿ ಬೇಲೂರು ಕೃಷ್ಣಮೂರ್ತಿ ನಿಧನರಾಗಿದ್ದಾರೆ.
ಬೇಲೂರಿನ ಹೆಸರಾಂತ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೇಲೂರು ಕೃಷ್ಣಮೂರ್ತಿ ( 90) ಅನಾರೋಗ್ಯದಿಂದ ನಿಧನರಾದರು.
ಮೃತರ ಸ್ವ ಇಚ್ಛೆಯಂತೆ ಅವರ ಮೃತದೇಹವನ್ನು ಹಾಸನದ ಶ್ರೀಧರ್ಮಸ್ಥಳ ಆಯುರ್ವೇದಿಕ್ ಆಸ್ಪತ್ರೆಗೆ ದೇಹ ದಾನ ನೀಡಲಾಗುತ್ತದೆ.
ಇದಕ್ಕೂ ಮೃತರ ಸ್ವಗೃಹದ ಬಳಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹಿರಿಯ ಸಾಹಿತಿ ಅಗಲಿಕೆಯಿಂದ ಸಾಹಿತ್ಯ ಲೋಕಬಡವಾಗಿದ್ದು, ಸಾಹಿತಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.