Select Your Language

Notifications

webdunia
webdunia
webdunia
webdunia

ಹೊತ್ತಿ ಉರಿದ ಡಸ್ಟರ್ ಕಾರ್ : ಕ್ಷಣದಲ್ಲೇ ಪಂಚಾಯ್ತಿ ಅಧ್ಯಕ್ಷನ ಜೀವ ಉಳಿಯಿತು

ಹೊತ್ತಿ ಉರಿದ ಡಸ್ಟರ್ ಕಾರ್ : ಕ್ಷಣದಲ್ಲೇ ಪಂಚಾಯ್ತಿ ಅಧ್ಯಕ್ಷನ ಜೀವ ಉಳಿಯಿತು
ಗದಗ , ಮಂಗಳವಾರ, 8 ಸೆಪ್ಟಂಬರ್ 2020 (18:17 IST)
ತಾಲೂಕು ಪಂಚಾಯಿತಿ ಅಧ್ಯಕ್ಷರೊಬ್ಬರ ಜೀವ ಕ್ಷಣದಲ್ಲೇ ಉಳಿದ ಘಟನೆ ನಡೆದಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಪಂಚಾಯತ ಅಧ್ಯಕ್ಷರ ಡಸ್ಟರ್ ಕಾರ್ ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಗಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಡಸ್ಟರ್ ಕಾರ್ ಸುಟ್ಟು ಕರಕಲಾಗಿದೆ. 
ಲಕ್ಷ್ಮೇಶ್ವರದಲ್ಲಿ ಘಟನೆ ನಡೆದಿದ್ದು, ತಾಲೂಕು ಪಂಚಾಯಿತಿ ಅಧ್ಯಕ್ಷ ಪರಸಪ್ಪ ಇಮ್ಮಡಿ  ಅವರು ಕ್ಷಣಾರ್ಧದಲ್ಲಿ ಪಾರಾಗಿದ್ದರಿಂದ ಜೀವ ಉಳಿಸಿಕೊಂಡಿದ್ದಾರೆ.

ಬಟ್ಟೂರ ನಿಂದ ಲಕ್ಷ್ಮೇಶ್ವರ ಹೋಗುವ ಬಳಿ ದಾರಿ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಬೆಂಕಿಯನ್ನು ಸ್ಥಳೀಯರು ನಂದಿಸಿದ್ದಾರೆ. 




Share this Story:

Follow Webdunia kannada

ಮುಂದಿನ ಸುದ್ದಿ

ಡೆಡ್ಲಿ ಕೊರೊನಾಗೆ ಸರ್ಕಾರಿ ಆಸ್ಪತ್ರೆ ವೈದ್ಯ ಬಲಿ