Publish Date: Tue, 08 Sep 2020 (17:33 IST)
Updated Date: Tue, 08 Sep 2020 (17:36 IST)
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಸಚಿವರೊಬ್ಬರು ಊಸರವಳ್ಳಿಗೆ ಹೋಲಿಕೆ ಮಾಡಿದ್ದಾರೆ.
ಮೈತ್ರಿ ಸರಕಾರ ಪತನವಾಗಿ ಒಂದು ವರ್ಷವಾದ ಮೇಲೆ ಇದೀಗ ಡ್ರಗ್ಸ್ ಮಾಫಿಯಾದಿಂದಾಗಿ ಸರಕಾರ ಪತನವಾಗಿದೆ ಎಂದಿರುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ಟಾಂಗ್ ನೀಡಿದ್ದಾರೆ.
ಏನು ಬೇಕಾದರೂ ಯಾವಾಗ ಎಂದರೆ ಆವಾಗ ಕುಮಾರಸ್ವಾಮಿ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಊಸರವಳ್ಳಿಯಂತೆ ಬಣ್ಣ ಬದಲಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.