Publish Date: Tue, 08 Sep 2020 (11:58 IST)
Updated Date: Tue, 08 Sep 2020 (12:01 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇತ್ತೀಚೆಗೆ ಮೈಸೂರು ಮೃಗಾಲಯದ ಆನೆಯೊಂದನ್ನು ದತ್ತು ಪಡೆದು ಸುದ್ದಿಯಾಗಿದ್ದರು. ಶಿವಣ್ಣ ಮಾಡಿದ ಈ ಕೆಲಸ ಈಗ ಅಭಿಮಾನಿಗಳಿಗೆ ಸ್ಪೂರ್ತಿಯಾಗಿದೆ.
ತಮ್ಮ ನೆಚ್ಚಿನ ಹೀರೋ ಮಾಡಿದ ಕೆಲಸದಿಂದ ಸ್ಪೂರ್ತಿಗೊಂಡ ಶಿವಣ್ಣನ ಅಪ್ಪಟ ಅಭಿಮಾನಿಗಳು ಸುಮಾರು 40 ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ತಾವು ಆನೆ ದತ್ತು ತೆಗೆದುಕೊಂಡ ಸಂದರ್ಭದಲ್ಲಿ ಶಿವಣ್ಣ ಇಂತಹ ಕೆಲಸವನ್ನು ಎಲ್ಲರೂ ಮಾಡಿ ಎಂದು ಮನವಿ ಮಾಡಿದ್ದರು. ತಮ್ಮ ನೆಚ್ಚಿನ ನಟನ ಮನವಿಗೆ ಸ್ಪಂದಿಸಿದ ಅಭಿಮಾನಿಗಳು ಅವರು ಹೇಳಿದಂತೆಯೇ ಮಾಡಿ ತೋರಿಸಿದ್ದಾರೆ.