Publish Date: Tue, 08 Sep 2020 (10:43 IST)
Updated Date: Tue, 08 Sep 2020 (10:45 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿ ಸಂಜನಾ ಗಲ್ರಾನಿ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಸಂಜನಾ ಜತೆ ಕಳೆದ ಒಂದೂವರೆ ವರ್ಷಗಳಿಂದ ವೈದ್ಯರೊಬ್ಬರು ಒಂದೇ ಫ್ಲ್ಯಾಟ್ ನಲ್ಲಿದ್ದರು. ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ವೃತ್ತಿ ಮಾಡುತ್ತಿರುವ ಅವರ ಜತೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು ಎನ್ನಲಾಗಿದೆ. ಆದರೆ ಸಿಸಿಬಿ ದಾಳಿ ಸಂದರ್ಭದಲ್ಲಿ ವೈದ್ಯರು ಅಲ್ಲಿರಲಿಲ್ಲ ಎನ್ನಲಾಗಿದೆ. ಸಿಸಿಬಿ ದಾಳಿಗೆ ಮುನ್ನ ವಕೀಲರನ್ನು ನಿಯೋಜಿಸಲು ಇದೇ ವೈದ್ಯರ ನೆರವನ್ನು ಪಡೆದಿದ್ದರು ಎನ್ನಲಾಗಿದೆ. ಅದರೆ ಮಾಧ್ಯಮಗಳ ಎದುರು ನನಗೆ ಮದುವೆಯಾಗಿಲ್ಲ ಎನ್ನುತ್ತಲೇ ಇದ್ದ ಸಂಜನಾ ಲಿವಿಂಗ್ ರಿಲೇಷನ್ ಶಿಪ್ ನಲ್ಲಿರುವುದು ಪಕ್ಕಾ ಎನ್ನಲಾಗಿದೆ.