Select Your Language

Notifications

webdunia
webdunia
webdunia
webdunia

ನನ್ನ ತಾಯಿ ಅನುಭವಿಸಿದ ಕಷ್ಟ ಯಾರಿಗೂ ಬರಬಾರದು ಎಂದು ಈ ಯೋಜನೆ ತಂದಿದ್ದ ಮಹಾಂತೇಶ್ ಬೀಳಗಿ

 Mahantesh Bilagi

Sampriya

ಬೆಂಗಳೂರು , ಬುಧವಾರ, 26 ನವೆಂಬರ್ 2025 (10:41 IST)
Photo Credit X
ಬೆಂಗಳೂರು: ನಿನ್ನೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಊರಲ್ಲಿ ನೀರವ ಮೌನ ಆವರಿಸಿದೆ. ಮಹಾಂತೇಶ್ ಅವರು ಬಡತನ ಕುಟುಂಬದಲ್ಲಿ ಹುಟ್ಟಿ ತಾಯಿಯ ಪರಿಶ್ರಮದಿಂದ ಸಾಧನೆ ಮಾಡಿದ ವ್ಯಕ್ತಿ. ಇವರನ್ನು ಸಾಕುವ ಸಲುವಾಗಿ ತಾಯಿ ರೊಟ್ಟಿಯನ್ನು ಮಾರಾಟ ಮಾಡಿ, ತನ್ನ ಮಗನಿಗೆ ವಿದ್ಯಾಭ್ಯಾಸವನ್ನು ನೀಡಿದ್ದರು.  

ಇನ್ನೂ ಮಹಾಂತೇಶ್ ಅವರಿಗೂ ತಾಯಿ ಅಂದರೆ ವಿಶೇಷವಾದ ಪ್ರೀತಿ. ತನ್ನ ತಾಯಿ ಅನುಭವಿಸಿದ ಕಷ್ಟ ಯಾರಿಗೂ ಬರಬಾರದೆಂದು ಮಹಾಂತೇಶ್ ಅವರು ಅಧಿಕಾರಿಯಾದ ಆರಂಭದಲ್ಲೇ "ಪಿಂಚಣಿ ಅದಾಲತ್ ಕಾರ್ಯಕ್ರಮ"ವನ್ನು ಯೋಜನೆಯನ್ನು ತಂದಿದ್ದರು. ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ.  

ಮಹಾಂತೇಶ್ ಅವರ ಮಾತು ಹೀಗಿದೆ: 

ನನ್ನ ತಂದೆ ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ಅಕಾಲಿಕ ಮರಣ ಹೊಂದುತ್ತಾರೆ. ಆಗ ನಮಗೆ ಕಿತ್ತು ತಿನ್ನುವ ಬಡತನ, ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ದಿನಗಳವರೆಗೆ ನನ್ನ ತಾಯಿಗೆ ಸ೦ಬ೦ಧಪಟ್ಟ ಅಧಿಕಾರಿಗಳು ಅಲೆದಾಡಿಸಿ ಕೊನೆಗೆ ನನ್ನ ತಾಯಿ 25 ರೂಪಾಯಿ ವಿಧವಾ ವೇತನ ಪಡೆಯಲು ನೂರು ರೂಪಾಯಿಗಳನ್ನು ಲಂಚವಾಗಿ ನೀಡಿದ ಮೇಲೆ ನನ್ನ ತಾಯಿಗೆ ವಿಧವಾ ವೇತನದ ಆದೇಶ ಪತ್ರವನ್ನು ನೀಡುತ್ತಾರೆ.

ಇದನ್ನೆಲ್ಲ ಗಮನಿಸಿದ ನನಗೆ ನನ್ನ ತಾಯಿಗೆ ಆದ ಅನ್ಯಾಯ ಸಮಾಜದ ಬೇರೆ ತಾಯಂದಿರಿಗೆ ಆಗಬಾರದು ಎಂದು ಸಂಕಲ್ಪ ಮಾಡಿ ಕಷ್ಟಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಹಂತ ಹಂತವಾಗಿ ಬೆಳೆದು ಇಂದು ನಾನು ಜಿಲ್ಲಾಧಿಕಾರಿಯಾಗಿದ್ದೇನೆ.

ನನ್ನ ಮೊದಲ ಗುರಿ ನನ್ನ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದು, ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾಧಿಕಾರಿಯಾದ ತಕ್ಷಣ

"ಪಿಂಚಣಿ ಅದಾಲತ್ ಕಾರ್ಯಕ್ರಮ"ವನ್ನು ಜಾರಿಗೆ ತಂದಿದ್ದು ಇದರ ಉದ್ದೇಶ ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಎಂಬುದು, ಇದರ ಅರ್ಥ ನಮ್ಮ ಅಧಿಕಾರಿಗಳು ಜನರ ಮನೆಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ

ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸುವುದು.

ಈ ನನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಚಾಚೂತಪ್ಪದೆ ನಿರ್ವಹಿಸಬೇಕಾಗಿ ಸೂಚಿಸಿರುತ್ತೇನೆ.

ಇಂತಿ ನಿಮ್ಮ

ಶ್ರೀ ಮಹಾಂತೇಶ್ ಬೀಳಗಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಉಗ್ರ ದಾಳಿ ನಡೆದಿದ್ದು ಇದೇ ದಿನ: ಅಂದು ಏನಾಗಿತ್ತು ಇಲ್ಲಿದೆ ವಿವರ