ಕಲಬುರಗಿ: ನಾವು ಅನುಭವಿಸಿದ ಅವಮಾನ, ಬಡತನ, ಕಷ್ಟ ಇತ್ತಲ್ಲಾ.. ಅದು ಸಮಾಜದೊಳಗೆ ಯಾರಿಗೂ ಬರಬಾರದು ಎಂದು ಸಂವಾದವೊಂದರಲ್ಲಿ ಹೇಳಿದ್ದರು ಹಿರಿಯ ಐಎಎಸ್ ಅಧಿಕಾರಿ ಮಹಂತೇಶ್ ಬೀಳಗಿ.
ಮಹಂತೇಶ್ ಬೀಳಗಿ ಪ್ರಸ್ತುತ ಕರ್ನಾಟಕ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಬೆಳಗಾವಿಯವರಾದ 51 ವರ್ಷದ ಮಹಂತೇಶ್ ಬೀಳಗಿ ಬಾಲ್ಯ ತೀರಾ ಕಡುಬಡತನದಲ್ಲಿ ಕಳೆದಿತ್ತು. ಅವರಿಗೆ ಎರಡು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ.
ತಮ್ಮ ಬಾಲ್ಯದ ಕಡುಬಡತನದ ಬಗ್ಗೆ ಅವರು ಸಂವಾದವೊಂದರಲ್ಲಿ ಹೇಳಿಕೊಂಡಿದ್ದರು. ನಾವು ಅನುಭವಿಸಿದ ಅವಮಾನ, ಬಡತನ, ಕಷ್ಟ ಇತ್ತಲ್ಲಾ.. ಅದು ಸಮಾಜದೊಳಗೆ ಯಾರಿಗೂ ಬರಬಾರದು ಎಂದೇ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನಮ್ಮ ಬಡತನದ ಅವಹೇಳನ ಬಹಳಷ್ಟು ಮಂದಿ ಮಾಡಿದ್ದಾರೆ. ಈಗ ಬಂಧುಗಳು ಹೇಳ್ತಾರೆ ಅವ ನನ್ನ ಕಾಕ ಎನ್ನುತ್ತಾರೆ, ಅವ ಹೀಗೆ ಎನ್ನುತ್ತಾರೆ. ಆದರೆ ಅಂದು ಯಾರೂ ಇರಲಿಲ್ಲ.
ಆಗ ಬಹಳಷ್ಟು ಜನ ಅವಮಾನ ಮಾಡಿದ್ರು, ಉಪವಾಸ ಮಲಗಿದ್ವಿ. ಅದಕ್ಕೇ ನಾನು ಇದೆಲ್ಲಾ ಮೀರಿ ನಿಲ್ಲಬೇಕು ಎಂದರೆ ಐಎಎಸ್ ಆಗಬೇಕು ಎಂಬುದೊಂದೇ ಗುರಿ ಇತ್ತು ಎಂದು ಸಂವಾದವೊಂದರಲ್ಲಿ ಮಹಂತೇಶ್ ಹೇಳಿದ್ದರು.