Select Your Language

Notifications

webdunia
webdunia
webdunia
webdunia

ಶಾಲಿನಿ ರಜನೀಶ್ ಯಾರು ಅವರು ಎಷ್ಟು ಪವರ್ ಫುಲ್ ಗೊತ್ತಾ

Shalini Rajaneesh

Krishnaveni K

ಬೆಂಗಳೂರು , ಶುಕ್ರವಾರ, 4 ಜುಲೈ 2025 (12:32 IST)
ಬೆಂಗಳೂರು: ಬಿಜೆಪಿ ಎಂಎಲ್ ಸಿ ಎನ್ ರವಿಕುಮಾರ್ ಅವಹೇಳನಕಾರೀ ಹೇಳಿಕೆ ನೀಡಿದ ಬಳಿಕ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರು ಭಾರೀ ಚಾಲ್ತಿಯಲ್ಲಿದೆ. ಅಷ್ಟಕ್ಕೂ ಈ ಶಾಲಿನಿ ರಜನೀಶ್ ಯಾರು ಅವರು ಎಷ್ಟು ಪವರ್ ಫುಲ್ ಗೊತ್ತಾ?

1989 ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಶಾಲಿನಿ ರಜನೀಶ್ ಆಡಳಿತಾತ್ಮಕ ಹುದ್ದೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಕಳೆದ ವರ್ಷವಷ್ಟೇ ಅವರ ಪತಿ ರಜನೀಶ್ ಗೊಯೆಲ್ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಸರ್ಕಾರವೇ ಶಾಲಿನಿ ರಜನೀಶ್ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿತ್ತು.

ಗ್ರಾಮೀಣಾಭಿವೃದ್ಧಿ ವಿಚಾರದಲ್ಲಿ ಪಿಎಚ್ ಡಿ ಪದವಿ ಪಡೆದವರು. ಸೈಕಲಾಜಿಯಲ್ಲಿ ಗೋಲ್ಡ್ ಮೆಡಲ್, ಅಮೆರಿಕಾದಲ್ಲಿ ಎಂಬಿಎ ಪದವಿ ಪಡೆದ ವಿದ್ಯಾವಂತೆ. ಅಷ್ಟೇ ಅಲ್ಲ ಬರವಣಿಗೆಯಲ್ಲೂ ಅವರಿಗೆ ಅಪಾರ ಆಸಕ್ತಿ. ಇದುವರೆಗೆ ಒಟ್ಟು 13 ಪುಸ್ತಕಗಳನ್ನು ಬರೆದಿದ್ದಾರೆ.

ಶಾಲಿನಿ ರಜನೀಶ್ ಪೂರ್ವಜರು ಪಂಜಾಬ್ ನವರು. ಮೂಲತಃ ಅವರು ಕನ್ನಡಿಗರು ಅಲ್ಲದೇ ಇದ್ದರೂ ಅವರ ಸೇವೆ ಆರಂಭವಾಗಿದ್ದು ಕರ್ನಾಟಕದಲ್ಲಿಯೇ. ಹೀಗಾಗಿ ನಿರರ್ಗಳವಾಗಿ ಕನ್ನಡ ಮಾತನಾಡಬಲ್ಲರು. ಕನ್ನಡದ ವಚನಗಳನ್ನು ಓದಿಕೊಂಡಿದ್ದಾರೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಎಂದರೆ ಎಷ್ಟು ಪ್ರಭಾವೀ ಸ್ಥಾನವೆಂದರೆ ಸರ್ಕಾರ ಹೊರಡಿಸುವ ಯಾವುದೇ ಆದೇಶಕ್ಕೂ ಇವರ ಸಹಿ ಇಲ್ಲದೇ ಮಾನ್ಯತೆ ಬರುವುದಿಲ್ಲ. ಯಾವುದೇ ಮುಖ್ಯ ಕಾರ್ಯದರ್ಶಿಗಳೂ ಆಯಾ ರಾಜ್ಯದ ಐಎಎಸ್ ಅಧಿಕಾರಿಗಳಿಗೇ ಬಾಸ್ ಆಗಿರುತ್ತಾರೆ. ಸರ್ಕಾರದ ಯಾವುದೇ ಮಹತ್ವದ ನಿರ್ಧಾರಗಳು, ಸಭೆಗಳಲ್ಲಿ ಅವರೂ ಹಾಜರಿರಬೇಕು. ಮುಖ್ಯಮಂತ್ರಿಗಳ ಜೊತೆಗೆ ಸಲಹೆಗಾರರಾಗಿ ಆಡಳಿತದ ಮುಖ್ಯಸ್ಥರಾಗಿ ಅವರು ಕಾರ್ಯನಿರ್ವಹಿಸುತ್ತಾರೆ. ಇದೀಗ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಇನ್ನೂ ಎರಡು ವರ್ಷ ಅವರು ಕಾರ್ಯನಿರ್ವಹಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂನ್ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್: ಸೋನಂ ಎರಡನೇ ಮದುವೆ