Select Your Language

Notifications

webdunia
webdunia
webdunia
webdunia

ಮಳೆ ನೀರಿನಲ್ಲಿ ಕೊಚ್ಚಿ ಹೋದವರಿಗಾಗಿ ಶೋಧಕಾರ್ಯ

webdunia
tumakuru , ಮಂಗಳವಾರ, 13 ಸೆಪ್ಟಂಬರ್ 2022 (20:58 IST)
ಮಳೆ ನಿಂತರೂ ಪ್ರವಾಹ ನಿಲ್ಲದ ಕಾರಣ ರಸ್ತೆಯಲ್ಲಿ ರಭಸವಾಗಿ ಹರಿಯುವ ನೀರಿಗೆ ಬೈಕ್ ಸಮೇತ ಇಬ್ಬರು ಚಳ್ಳಕೆರೆಯಲ್ಲಿಕೊಚ್ಚಿ ಹೋಗಿದ್ದಾರೆ .ಇನ್ನು ಇಬ್ಬರು ಮೃತಪಟ್ಟ ಘಟನೆ ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
 
ಚಳ್ಳಕೆರೆ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿದ್ದು ,ಮಳೆ ನಿಂತರೂ ನೀರಿನ ಹರಿವು ಹೆಚ್ಚಾಗಿರುವುದರಿಂದ ಚಳ್ಳಕೆರೆ ತಾಲೂಕಿನ ಕೊರ್ಲಕುಂಟೆ ಗ್ರಾಮದ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸೋಮವಾರ ರಾತ್ರಿ 8.30 ರ ಸುಮಾರಿನಲ್ಲಿ ಮೂರು ಜನರು ಬೈಕ್ ನಲ್ಲಿ ಹೋಗುವಾಗ ರಸ್ತೆಯಲ್ಲಿ ಹರಿಯುತ್ತಿದ್ದ ಕೋಡಿ ನೀರಿ ರಭರಸಕ್ಕೆ ಕುಮಾರ್ .ಓಬಳೇಶ್ .ಮಂಜಣ್ಣ ಮೂರು ಜನರು ಬೈಕ್ ಸಮೇತ ಕೊಚ್ಚಿ ಹೋಗಿರುತ್ತಾರೆ.ಅದರಲ್ಲಿ ಮಂಜಣ್ಣ  ಪ್ರಾಣಾಪಯದಿಂದ ನೀರಿನಿಂದ ಎದ್ದು ಬಂದರೆ. ಕುಮಾರ್ ಮತ್ತು ಓಬಳೇಶ್ ನೀರಿನಲ್ಲಿ ಕಣ್ಮರೆಯಾಗಿದಾರೆ.  ಮಂಗಳವಾರ ಬೆಳ್ಳಂ ಬೆಳಗ್ಗೆ ಪರಶುರಾಂಪುರ ಪಿಎಸ್ ಐ ಕಾಂತರಾಜ್ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ನೇತೃತ್ವದಲ್ಲಿ ತೆಪ್ಪದ ಮೂಲಕ ಮೃತ ದೇಹಗಳಿಗೆ ಹುಡುಕಾಟ ನಡೆಸಿದಾಗ ಬೈಕ್ ಸಿಕ್ಕಿರುತ್ತದೆ.ಇನ್ನು  ಇಬ್ಬರ ಮೃತ ದೇಹಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿ ಎಸ್ ಐ ಪಟ್ಟಿಗೆ ಆಯ್ಕೆಯಾದವರಿಂದ ಫ್ರೀಡಂಪಾರ್ಕ್ ನಲ್ಲಿ ಧರಣಿ