Select Your Language

Notifications

webdunia
webdunia
webdunia
webdunia

ಪಿ ಎಸ್ ಐ ಪಟ್ಟಿಗೆ ಆಯ್ಕೆಯಾದವರಿಂದ ಫ್ರೀಡಂಪಾರ್ಕ್ ನಲ್ಲಿ ಧರಣಿ

A sit-in at Freedom Park by those elected to the PSI list
bangalore , ಮಂಗಳವಾರ, 13 ಸೆಪ್ಟಂಬರ್ 2022 (20:52 IST)
ಪಿಎಸ್ಐ ಹುದ್ದೆಗೆ ವರ್ಷಗಟ್ಟಲೇ ಕೆಲಸ ಕಾರ್ಯಗಳು ಬಿಟ್ಟು  ಕಷ್ಟಪಟ್ಟು ಓದಿದ್ದ ಅಭ್ಯರ್ಥಿಗಳು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನ ಮಾಡಿದ್ದಾರೆ . ಪರೀಕ್ಷೆ ಮುಗಿದು ಒಂದು ವರ್ಷವಾದರೂ ನಮಗೆ ಯಾವುದೇ ಉದ್ಯೋಗ ಸಿಗಲಿಲ್ಲ. ಹೀಗಾಗಿ ಇಂದು ಉದ್ಯೋಗವನ್ನು ಬಿಟ್ಟು ನಾವು ಅತಂತ್ರ ಸ್ಥಿತಿಯಲ್ಲಿದ್ದೇವೆ. ಇದು ತುಂಬ ನೋವಿನ ಸಂಗತಿ ಎಂದು ಸಮತಾ ಸೈನಿಕ ದಳದ ಬೆಂಬಲ ಪಡೆದು ಪಿಎಸ್ಐ ಪಟ್ಟಿಗೆ ಆಯ್ಕೆಯಾದವರು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರೆ .ಅಷ್ಟೇ ಅಲ್ಲದೆ  ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದೇವೆ .ಆದ್ರೆ  ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ನಮಗೆಲ್ಲ ಶಿಕ್ಷೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.ಪಿಎಸ್ಐ ನೇಮಕ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾದ  400ಕ್ಕೂ ಅಧಿಕ ಅಭ್ಯರ್ಥಿಗಳು ಫ್ರೀಡಂಪಾರ್ಕ್ ನಲ್ಲಿ ಜಮಾಯಿಸಿದ್ದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವವಿಖ್ಯಾತ ಮೈಸೂರು ದಸರಾ ಸಮೀಪಿಸುತ್ತಿದ್ದಂತೆ ಮೇಯರ್ ಸಿಟಿ ರೌಂಡ್ಸ್