ರಾಯಚೂರು: ಸಚಿವ ಸತೀಶ್ ಜಾರಕಿಹೊಳಿ ಅವರು ಹೊಸ ಹೆಲಿಕಾಪ್ಟರ್ ಅನ್ನು ಖರೀದಿ ಮಾಡಿದ್ದು ಸಿಎಂ ಆಗಲು ಪ್ರಚಾರಕ್ಕಾಗಿ ಅನ್ನೋದು ತಪ್ಪು ಕಲ್ಪನೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು ಅವರು ಸತೀಶ್ ಪರ ಬ್ಯಾಟಿಂಗ್ ಬೀಸಿದ್ದಾರೆ.
ರಾಯಚೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಸಿದ ಅವರು, ಹೆಲಿಕಾಪ್ಟರ್‌ನಲ್ಲಿ ಓಡಾಡುವ ಸತೀಶರ್ ಜಾರಕಿಹೊಳಿ ಅವರು ಆಗಾಗ ನಮ್ಮನ್ನೂ ಕರೆದುಕೊಂಡು ಹೋಗುತ್ತಾರೆ. ಅವರು ಸಿಎಂ ಆಗಲು ಪ್ರಚಾರಕ್ಕೆ ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆ ಎನ್ನುವುದು ತಪ್ಪು ಕಲ್ಪನೆ ಎಂದರು.
ನಾನು ಸತೀಶ್ ಜಾರಕಿಹೊಳಿ ಬಹಳ ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇವೆ. ಪಕ್ಷನಿಷ್ಟರಾಗಿ ಪಕ್ಷಕ್ಕೆ ಬದ್ಧರಾಗಿದ್ದೇವೆ, ಹೇಳುವವರಿಗೆ ಬುದ್ಧಿ ಇಲ್ಲ. ಸಚಿವ ಸಂಪುಟದಲ್ಲಿರುವ ಎಲ್ಲಾ ಸಚಿವರು ಪಕ್ಷಕ್ಕೆ ನಿಷ್ಠಾವಂತರಾಗಿದ್ದೇವೆ. ಬೇರೆ ಪಕ್ಷದಿಂದ ಬಂದವರು ಪಕ್ಷಕ್ಕೆ ಬದ್ಧರಾಗಿದ್ದಾರೆ ಎಂದರು.