Publish Date: Tue, 08 Nov 2022 (09:58 IST)
Updated Date: Tue, 08 Nov 2022 (09:05 IST)
ಕಾರವಾರ : ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ. ಹಿಂದೂ ವಿರೋಧಿ ಸ್ಮಶಾನದಲ್ಲಿ ಪೂಜೆ, ಸ್ಮಶಾನದಲ್ಲಿ ಮದುವೆ, ಸ್ಮಶಾನದಲ್ಲಿ ಊಟ ಮಾಡುವ ನಾಸ್ತಿಕತೆ ಇರುವವರಿಗೆ ಹಿಂದೂ ಶಬ್ಧದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ.
ಅವರ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ಹಿಂದೂಗಳ ಬಳಿ ಕ್ಷಮೆ ಕೇಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ಇನ್ನೂ ಕೂಡ ಬುದ್ಧಿ ಬಂದಿಲ್ಲ.
ಹಿಂದುತ್ವ, ಹಿಂದೂಗಳನ್ನು, ಹಿಂದೂಧರ್ಮ, ಹಿಂದೂ ಸಂಘಟನೆಗಳನ್ನು ಅವಹೇಳನ ಮಾಡುವುದು ಸರಿಯಲ್ಲ. ಕುವೆಂಪುರವರು ಹಿಂದೂ, ಜೈನ, ಸಿಖ್, ಕ್ರಿಶ್ಚಿಯನ್ ಎಂಬ ಶಬ್ಧವನ್ನು ನಾಡಗೀತೆಯಲ್ಲಿ ಬಳಸಿದ್ದಾರೆ.