ಉಡುಪಿ : ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕು.
ಕರಾವಳಿಯ ಒಂದು ಕ್ಷೇತ್ರವನ್ನು ಆಯ್ಕೆ ಮಾಡಬೇಕು. ಉಡುಪಿ ಜಿಲ್ಲೆಯಿಂದಲೇ ಕಣಕ್ಕಿಳೀರಿ ಸರ್ ಎಂಬ ಒತ್ತಾಯ ಶುರುವಾಗಿದೆ. ಸಂಘಟನೆಯ ಒತ್ತಾಸೆಗೆ ಮಣಿದು ಗುರು ಶಿಷ್ಯನ ನಡುವೆ ಸಮರ ಏರ್ಪಡುತ್ತಾ ಎಂಬ ಕುತೂಹಲ ಜೋರಾಗಿದೆ.
ಮುತಾಲಿಕ್ ಅಂದ್ರೆ ಹಿಂದೂ ಫೈರ್ ಬ್ರ್ಯಾಂಡ್. ಹಿಂದುತ್ವ ರಾಷ್ಟ್ರವಾದಿ ವಿಚಾರದಲ್ಲಿ ಪ್ರಮೋದ್ ಮುತಾಲಿಕ್ ದೇಶದಲ್ಲಿ ಮುಂಚೂಣಿ ಹೆಸರು.
ರಾಜ್ಯದಲ್ಲಿ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿದ್ದಂತೆ ಪ್ರಮೋದ್ ಮುತಾಲಿಕ್ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕರಾವಳಿಯ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.