Publish Date: Thu, 06 Oct 2022 (08:43 IST)
Updated Date: Thu, 06 Oct 2022 (10:45 IST)
ಮಂಡ್ಯ : 2024 ರ ಲೋಕಸಭಾ ಚುನಾವಣೆ ದೃಷಿಯಿಂದ ಆರಂಭವಾದ ಕೈ ಪಕ್ಷದ ಭಾರತ್ ಜೋಡೋ ಯಾತ್ರೆ ವಿರಾಮದ ಬಳಿಕ ಇಂದಿನಿಂದ ಮತ್ತೆ ಆರಂಭವಾಗಲಿದೆ.
ರಾಜ್ಯದಲ್ಲಿ 18 ದಿನಗಳ ಕಾಲ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಇಂದು ರಾಹುಲ್ ಗಾಂಧಿ ಜೊತೆ ಸೋನಿಯಾಗಾಂಧಿ ಸಹ ಹೆಜ್ಜೆ ಹಾಕಲಿದ್ದಾರೆ.
ಮೈಸೂರಿಗೆ ಬಂದಿರುವ ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ಇದೀಗ 2 ದಿನಗಳ ವಿರಾಮದ ಬಳಿಕ ಪುನಾರಂಭಗೊಳ್ಳಲಿದೆ. ಇಂದು ಮಂಡ್ಯದ ಪಾಂಡವಪುರದ ಮಹದೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದೆ.
11 ಗಂಟೆಗೆ ನಾಗಮಂಗಲದ ಚೌಡೇನಹಳ್ಳಿ ಬಳಿ ವಿಶ್ರಾಂತಿ ಪಡೆದು, ಸಂಜೆ 4ಕ್ಕೆ ಪಾದಯಾತ್ರೆ ಆರಂಭಿಸಲಿದ್ದಾರೆ. ಸಂಜೆ 7ಗಂಟೆಗೆ ಮಂಡ್ಯದ ಬ್ರಹ್ಮದೇವರ ಹಳ್ಳಿ ಗ್ರಾಮದಲ್ಲಿ ವ್ಯಾಸ್ತವ್ಯ ಮಾಡಲಿದ್ದಾರೆ.