Select Your Language

Notifications

webdunia
webdunia
webdunia
webdunia

ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ : ಮುತಾಲಿಕ್

ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ : ಮುತಾಲಿಕ್
ಬೆಳಗಾವಿ , ಗುರುವಾರ, 1 ಸೆಪ್ಟಂಬರ್ 2022 (14:30 IST)
ಬೆಳಗಾವಿ : ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡದಿದ್ದರೆ, ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದರು.

ತಾಲೂಕಿನ ಹಿರೇಬಾಗೆವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ ಮುಕ್ತವಾಗಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡಬೇಕು.

ಡಿಜೆ ಹಾಕಬೇಡಿ, ಸೌಂಡ್ ಹಾಕಬೇಡಿ, ಅನುಮತಿ ಪಡೆಯಬೇಕು ಅಂತಾ ಕಿರಿಕಿರಿ ಮಾಡಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದರು.

ಕೋವಿಡ್ ಕಾರಣದಿಂದಾಗಿ ಎರಡು ವರ್ಷ ಸಾರ್ವಜನಿಕ ಗಣೇಶೋತ್ಸವ ಆಗಿರಲಿಲ್ಲ. ಈ ವರ್ಷದಿಂದ ಮುಕ್ತವಾದ ಗಣೇಶೋತ್ಸವ ಕಾರ್ಯಕ್ರಮ ನಡೀತಿದೆ. ಸೌಂಡ್ ಸಿಸ್ಟಮ್, ಲೈಟಿಂಗ್ನವರಿಗೆ ಯಾವುದೇ ರೀತಿಯ ನಿರ್ಬಂಧ ಹಾಕಬಾರದು ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕಾಲುವೆ ಒತ್ತುವರಿ ಮಾಡಿದ್ರೆ ಎಚ್ಚರ ...!!!!