Select Your Language

Notifications

webdunia
webdunia
webdunia
webdunia

ಈದ್ಗಾ ಮೈದಾನದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಪ್ರತಿಷ್ಠಾಪನೆ

ಈದ್ಗಾ ಮೈದಾನದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಪ್ರತಿಷ್ಠಾಪನೆ
ಹುಬ್ಬಳ್ಳಿ , ಬುಧವಾರ, 31 ಆಗಸ್ಟ್ 2022 (09:21 IST)
ಹುಬ್ಬಳ್ಳಿ : ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಮಧ್ಯರಾತ್ರಿ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ, ಹಿಂದೂಪರ ಸಂಘಟನೆಗಳು ಬುಧವಾರ ಬೆಳ್ಳಂಬೆಳಗ್ಗೆ ಈದ್ಗಾದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅಂಜುಮಾನ್ ಇಸ್ಲಾಂ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂ ವಿಚಾರಣೆಗೂ ಮುನ್ನವೇ ಹಿಂದೂ ಸಂಘಟನೆಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಸಮಯ ಬದಲಾವಣೆ ಮಾಡಿಕೊಂಡಿವೆ.

ಇಂದು ಮಧ್ಯಾಹ್ನ 12 ಗಂಟೆ ಬದಲಿಗೆ ಬೆಳಗ್ಗೆ 7:30ಕ್ಕೆ 4 ಅಡಿ ಇರುವ ಸಿಂಹಾಸನಾರೂಢ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿವೆ. ಉತ್ಸವ ಮೂರ್ತಿ ಬಿಟ್ಟು, ಸಣ್ಣ ಗಣಪತಿ ಮೂರ್ತಿ ಪ್ರತಿಷ್ಟಾಪಿಸಲಾಗಿದೆ.

ಧಾರವಾಡ ಮೂಲದ ವ್ಯಕ್ತಿ ದೇಣಿಗೆ ನೀಡಿರುವ ಮೂರ್ತಿಯನ್ನು ಉತ್ಸವ ಸಮಿತಿ ಅಧ್ಯಕ್ಷ ಸಂಜೀವ್ ಬಡೆಸ್ಕರ್ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಶಿಕ್ಷಣ ನೀತಿ ಪೀಳಿಗೆ ಭವಿಷ್ಯಕ್ಕೆ ಉಜ್ವಲಗೊಳಿಸಲಿದೆ : ಗೆಹ್ಲೋಟ್