Select Your Language

Notifications

webdunia
webdunia
webdunia
webdunia

ಮಂದಿರಗಳಿಗೆ ಹಣ ಕೊಡುವುದನ್ನು ನಿಲ್ಲಿಸಿ : ಮುತಾಲಿಕ್

webdunia
ಧಾರವಾಡ , ಸೋಮವಾರ, 29 ಆಗಸ್ಟ್ 2022 (08:23 IST)
ಧಾರವಾಡ : ಮಠ-ಮಂದಿರಗಳಿಗೆ ದುಡ್ಡು ಕೊಡುವುದನ್ನು ನಿಲ್ಲಿಸಿ, ಹಿಂದೂ ಸಂಘಟನೆಗಳಿಗೆ ಕೊಡಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.

ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಅವರು, ಮಠ ಮಂದಿರ ಬಿಟ್ಟು ಹಿಂದೂ ಸಂಘಟನೆಗಳಿಗೆ ಹಣ ಕೊಡಿ. ಹಿಂದೂ ಸಂಘಟನೆಗಳಿಗೆ ಬಲ ಕೊಡಿ. ಆಗ ನಿಮಗೆ ನಾವು ಹಿಂದೂ ರಾಷ್ಟ್ರ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

ಇದೇ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಗೋ ಮಾತೆ, ಮಾತೆ ಎಂದು ಹೇಳುತ್ತಿದ್ದರು. ಅದಕ್ಕಾಗಿ ಗೋ ಹತ್ಯೆ ಕಾನೂನು ತಂದಿದ್ದಾರೆ. ಆದರೂ ಗೋಹತ್ಯೆ ನಡೆಯುತ್ತಿದೆ. ಆದರೆ ಒಂದೂ ಗೋಹತ್ಯೆ ಆಗದಂತೆ ಮಾಡುವ ಶಕ್ತಿ ಹಿಂದೂ ಸಂಘಟನೆಗಳಿಗಿದೆ. ಆದ್ದರಿಂದ ಹಿಂದೂ ಸಂಘಟನೆಗಳಿಗೆ ಸಮಾಜ ಬಲ ಕೊಡಬೇಕು ಎಂದು ತಿಳಿಸಿದರು.

ಅಂದು ಹಿಂದುತ್ವದ ಹೋರಾಟಗಳು ಯಶಸ್ವಿಯಾಗಿದ್ದವು. ಇಂದು ಅದು ಆಗುತ್ತಿಲ್ಲ. ಅವತ್ತು ಶುದ್ಧ, ಚಾರಿತ್ರ್ಯ, ತ್ಯಾಗ, ಬಲಿದಾನದ ನಾಯಕರಿದ್ದರು. ಅದರ ಪರಿಣಾಮದಿಂದ ದುಷ್ಟ ಶಕ್ತಿಗಳ ನಾಶವಾಯಿತು. ಹಿಂದವೀ ಸಮಾಜ ನಿರ್ಮಾಣ ಆಗಿತ್ತು. ಅದಕ್ಕೆ ಛತ್ರಪತಿ ಶಿವಾಜಿ ಮಹಾರಾಜರೇ ಉದಾಹರಣೆಯಾಗಿದ್ದಾರೆ. ಆದರೆ ಇವತ್ತಿನ ನಾಯಕರು ಯಾರು ಎಂದು ಪ್ರಶ್ನಿಸಿದ ಅವರು, ನೀಚ, ನಿರ್ಲಜ್ಜ, ಲೂಟಿಕೋರರಿದ್ದಾರೆ ಎಂದು ಕಿಡಿಕಾರಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಪ್ರಿಯಕರನಿಗೆ ಬುದ್ಧಿ ಹೇಳಲು ಹೋದವ ತಾನೇ ಕೊಲೆಯಾದ!