Publish Date: Sat, 01 Dec 2018 (10:16 IST)
Updated Date: Sat, 01 Dec 2018 (10:19 IST)
ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ನಾಯಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಮತ್ತೆ ಕೋಲ್ಡ್ ವಾರ್ ಶುರುವಾಗಿದೆ.
ಎರಡು ಶಾಸಕರು ಇದೀಗ ತಮ್ಮ ಕ್ಷೇತ್ರಕ್ಕೆ ಬಸ್ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಜಿದ್ದಿಗೆ ಬಿದ್ದು ಕೆಲಸ ಮಾಡುತ್ತಿದ್ದಾರೆ. ವಾರದ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಕ್ಷೇತ್ರಕ್ಕೆ ಹೊಸದಾಗಿ ಎರಡು ಬಸ್ ಗೆ ಚಾಲನೆ ನೀಡಿದ್ದರು.
ಅದಾಗಿ ವಾರ ಕಳೆಯುವಷ್ಟರಲ್ಲೇ ಇದೀಗ ಸತೀಶ್ ಜಾರಕಿಹೊಳಿ ಕೂಡಾ ತಮ್ಮ ಕ್ಷೇತ್ರಕ್ಕೆ 10 ಹೊಸ ಬಸ್ ಗಳ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಇಬ್ಬರೂ ಶಾಸಕರು ಜಿದ್ದಿಗೆ ಬಿದ್ದು ಕೆಲಸ ಮಾಡುತ್ತಿರುವುದು ಜನರಿಗಂತೂ ಉಪಯೋಗವೇ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ