ಪಾಕಿಸ್ತಾನದ ಜೊತೆ ಮ್ಯಾಚ್ ಆಡಿದ್ದೇಕೆ, ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ: ಸಂತೋಷ್ ಲಾಡ್

Krishnaveni K
ಮಂಗಳವಾರ, 16 ಸೆಪ್ಟಂಬರ್ 2025 (14:48 IST)
ಬೆಂಗಳೂರು: ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ, ನಿಜಕ್ಕೂ ಪಾಕಿಸ್ತಾನದ ಜೊತೆ ಕ್ರಿಕೆಟ್ ಮ್ಯಾಚ್ ಆಡಿದ್ದು ಯಾಕೆ ಎಂದು ಬಾಯ್ಬಿಡಲಿ ಎಂದು ಸಚಿವ ಸಂತೋಷ್ ಲಾಡ್ ಟೀಕಾ ಪ್ರಹಾರ ನಡೆಸಿದ್ದಾರೆ.

ಬಿಜೆಪಿಯವರು ಯಾವತ್ತೂ ಧರ್ಮದ ವಿಚಾರ ಮಾತ್ರ ಮಾತನಾಡೋದು. ಮತಾಂತರ ಆದವರಿಗೆ ಮೂಲ ಜಾತಿಯ ಬಗ್ಗೆ ನಮೂದಿಸಲು ಅವಕಾಶ ನೀಡಿರುವುದರ ಬಗ್ಗೆ ಬಿಜೆಪಿ ಟೀಕಿಸುತ್ತಿರುವುದಕ್ಕೆ ಸಂತೋಷ್ ಲಾಡ್  ಈ ರೀತಿ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನದ ಜೊತೆ ಮ್ಯಾಚ್ ಆಡಿದ ಬಗ್ಗೆ ವಿರೋಧ ಮಾಡಲಿ ನೋಡೋಣ. ಕೇವಲ ಧರ್ಮದ ಬಗ್ಗೆ ಮಾತ್ರನಾ ಇವರ ವಿರೋಧ. ಇವರಿಗೆ ನಾಚಿಕ ಮಾನ, ಮರ್ಯಾದೆ ಇದೆಯಾ ಎಂದು ಸಂತೋಷ್ ಲಾಡ್ ಹೇಳಿದ್ದಾರೆ. ಬಿಜೆಪಿಯವರಿಗೆ ಮುಸ್ಲಿಮರು, ಪಾಕಿಸ್ತಾನ ಇಲ್ಲದೆ ವ್ಯವಹಾರ ಇಲ್ಲ. ಅದನ್ನೇ ಇಟ್ಟುಕೊಂಡು ಬೇಳೆ ಬೇಯಿಸಿಕೊಳ್ಳುತ್ತಾರೆ. ಬಿಜೆಪಿಯವರು ಆಪರೇಷನ್ ಸಿಂಧೂರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿದ್ರು.. ಅಮಿತ್ ಶಾ ಪುತ್ರ ಜಯ್ ಶಾ ನೇ ಐಸಿಸಿ ಅಧ್ಯಕ್ಷ. ಅದರ ಬಗ್ಗೆ ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ ಗಾಂಧಿ ದೇಶದ ಪ್ರೇಮದ, ಧೈರ್ಯದ ಪ್ರತೀಕ: ಡಿಕೆ ಶಿವಕುಮಾರ್

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 21 ನೇ ಕಂತು ಬಿಡುಗಡೆ: ಇಂದೇ ಖಾತೆ ಚೆಕ್ ಮಾಡಿ

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಜೀವರಕ್ಷಕ ಔಷಧಿ ಟೆಂಡರ್ ನಲ್ಲಿ ಗೋಲ್ಮಾಲ್: ಸಿ.ಟಿ.ರವಿ

ಇಂದಿರಾ ಗಾಂಧಿ ಪುಸ್ತಕ 100 ರೂ ಕೊಟ್ಟು ತಗೊಂಡು ಹೋಗಿ: ಡಿಕೆ ಶಿವಕುಮಾರ್ ತಾಕೀತು

ಭ್ರಷ್ಟ, ಜನ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ

ಮುಂದಿನ ಸುದ್ದಿ
Show comments