ಸಾಯಿ ಬಾಬಾಗೆ ಕೈ ಮುಗಿದ್ರು; ಲಕ್ಷ ಲಕ್ಷ ಹಣ ದೋಚಿದ್ರು!

Webdunia
ಮಂಗಳವಾರ, 11 ಡಿಸೆಂಬರ್ 2018 (15:22 IST)
ಸತ್ಯಸಾಯಿ ಬಾಬಾಗೆ ನಮಿಸಿದ ಕಳ್ಳರು ಆತನ ಮುಂದಿದ್ದ ಹುಂಡಿಯನ್ನು ಕಳ್ಳತನ ಮಾಡಿ 5 ಲಕ್ಷಕ್ಕೂ ಅಧಿಕ ಹಣದೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯ ಸಾಯಿ ಬಾಬಾ ಮಂದಿರದ ಹಿಂಭಾಗದ ಕಡೆ ಗ್ರಿಲ್ ಮುರಿದು ಹುಂಡಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಹುಬ್ಬಳ್ಳಿಯ ರಾಜನಗರದಲ್ಲಿ ಈ ಘಟನೆ ನಡೆದಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ನಾಲ್ವರು ಕಳ್ಳರು ಒಳನುಗ್ಗಿ ಸಾಯಿಬಾಬಾ ಮೂರ್ತಿಯ ಎದುರು ಇದ್ದ ಹುಂಡಿ ಮತ್ತು ಕೌಂಟರ್‌ನ ಬೀಗ ಮುರಿದು ಅದರಲ್ಲಿದ್ದ ಐದು ಲಕ್ಷಕ್ಕೂ ಹೆಚ್ಚು ನಗದನ್ನು ದೋಚಿದ್ದಾರೆ. 

ಇವರು ಕಳ್ಳತನ ಮಾಡುವ ಮುನ್ನ ಶಿರಡಿ ಸಾಯಿ ಬಾಬಾನ‌ ಮೂರ್ತಿಗೆ ಒಬ್ಬ ಕೈ ಮುಗಿದು ಹುಂಡಿಯನ್ನು ಎತ್ತಲು ಪ್ರಯತ್ನಿಸಿದ್ದಾನೆ. ಕಳ್ಳರ ಕೈಚಳಕ ಹಾಗೂ ಸಂಪೂರ್ಣ ಚಲನವಲನ ಮಂದಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಡಿಸೆಂಬರ್‌ 3 ರಂದು ನಸುಕಿನ ಎರಡು ಗಂಟೆಯಲ್ಲಿ ಈ ದರೋಡೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದೇವಸ್ಥಾನದ ಸಮಿತಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಮದುವೆ ಸಂಭ್ರಮಾಚರಣೆ ವೇಳೆ ಹೈಡ್ರೋಜನ್ ಬಲೂನ್ ಸ್ಪೋಟ: ವಧು ವರರ ಕತೆ ಏನಾಯ್ತು

ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಡಿಕೆ ಶಿವಕುಮಾರ್: ಭಾರೀ ಕುತೂಹಲ ಮೂಡಿಸಿದ ನಡೆ

Arecanut Price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಬಂಪರ್ ಬೆಲೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಈ ಒಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿಗೆ ಹೆಚ್ಚು ಒಲವು

ಮುಂದಿನ ಸುದ್ದಿ
Show comments