Webdunia - Bharat's app for daily news and videos

Install App

ತುಳುವಿನಲ್ಲಿ ಸದಾನಂದ ಗೌಡರ ಇಂಟರೆಸ್ಟಿಂಗ್ ಟ್ವೀಟ್

Webdunia
ಶುಕ್ರವಾರ, 11 ಆಗಸ್ಟ್ 2017 (10:33 IST)
ಬೆಂಗಳೂರು: ಕೇಂದ್ರ ಸಚಿವ ಸದಾನಂದ ಗೌಡರು ಮೂಲತಃ ತುಳುನಾಡಿನವರು ಎಂಬುದು ಎಲ್ಲರಿಗೂ ಗೊತ್ತು. ಅವರು ತಮ್ಮ ಟ್ವಿಟರ್ ಪೇಜ್ ನಲ್ಲಿ ಮಾಡಿರುವ ತುಳು ಭಾಷೆಯ ಟ್ವೀಟ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 
ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಟ್ವೀಟ್ ಮಾಡಿರುವ ಅವರು ತುಳು ಭಾಷೆಯಲ್ಲಿ ತಮ್ಮ ಜಲ ನೆಲದ ಬಗ್ಗೆ ಸಂದೇಶ ಬರೆದುಕೊಂಡಿದ್ದಾರೆ. ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸುವುದಕ್ಕೆ ನನ್ನ ಸಹಮತವಿದೆ ಎಂದು ಕನ್ನಡದಲ್ಲಿ ಬರೆದುಕೊಂಡಿರುವ ಗೌಡರು ನಂತರ ತುಳುವಿನಲ್ಲಿ ಟ್ವೀಟ್ ಮಾಡಿದ್ದಾರೆ.

ತುಳು ಅಪ್ಪೆನ, ಪುಟ್ಟಾಯಿನ ಅಪ್ಪೆನ ಋಣ ತೀರಿಸಾವೆರ ಸಾಧ್ಯ ಇಜ್ಜಿ. ನಮ ಸೇವೆ ಮಲ್ಪುಗ. ತುಳು ಅಪ್ಪೆ ಜೋಕ್ಲು ಒಟ್ಟಾದ್ ನಮ ಹಕ್ಕುನ ಪಡೆಕ್ಕ (ತುಳು ತಾಯಿಯ, ಜನ್ಮದಾತೆಯ ಋಣ ತೀರಿಸಲು ಸಾಧ್ಯವಿಲ್ಲ. ನಾವು ಅವಳ ಸೇವೆ ಮಾಡೋಣ. ತುಳು ತಾಯಿಯ ಮಕ್ಕಳೆಲ್ಲಾ ಒಂದುಗೂಡಿ ನಮ್ಮ ಹಕ್ಕು ಪಡೆಯೋಣ) ಎಂದು ಗೌಡರು ಮಾಡಿರುವ ಟ್ವೀಟ್ ಗೆ ಭಾರೀ ಲೈಕ್ಸ್ ಬಂದಿದೆ. ನಟ ಜಗ್ಗೇಶ್ ಸೇರಿದಂತೆ ಸೆಲೆಬ್ರಿಟಿಗಳು ಇದನ್ನು ರಿಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ… ಉಷಾಪತಿ ಇದೀಗ 13 ನೇ ಉಪರಾಷ್ಟ್ರಪತಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments