Select Your Language

Notifications

webdunia
webdunia
webdunia
webdunia

ಪಾಕ್ ಬಗ್ಗೆ ಏನೋ ಹೇಳಲು ಹೋಗಿ ಜಾಡಿಸಿಕೊಂಡ ಶೊಯೇಬ್ ಅಖ್ತರ್

ಶೊಯೇಬ್ ಅಖ್ತರ್
ಕರಾಚಿ: ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ತಮ್ಮ ದೇಶದ ಬಗ್ಗೆ ಹೊಗಳಲು ಹೋಗಿ ಟ್ವಿಟರ್ ನಲ್ಲಿ ಸರಿಯಾಗಿ ಜಾಡಿಸಿಕೊಂಡಿದ್ದಾರೆ.

 
ಪಾಕಿಸ್ತಾನದಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ದರ್ಶನ್ ಲಾಲ್ ಎಂಬ ಹಿಂದೂ ಧರ್ಮಕ್ಕೆ ಸೇರಿದ ಸಂಸದರೂ ಸಚಿವರಾಗಿದ್ದಾರೆ. ಇದನ್ನೇ ತಮ್ಮ ಟ್ವಿಟರ್ ನಲ್ಲಿ ಉಲ್ಲೇಖಿಸಿ ಶೊಯೇಬ್ ಪೇಚಿಗೆ ಸಿಲುಕಿದ್ದಾರೆ.

‘ದರ್ಶನ್ ಲಾಲ್ ಎಂಬ ಹಿಂದೂ ವ್ಯಕ್ತಿ ಇದೀಗ ನಮ್ಮ ಸರ್ಕಾರದಲ್ಲಿ ಸಚಿವರು. ನಮ್ಮದು ಜಾತ್ಯಾತೀತ ರಾಷ್ಟ್ರ ಎಂದು ಹೇಳುವ ವಿನಮ್ರ ರೀತಿಯಿದು’ ಎಂದು ಫೋಟೋ ಸಮೇತ ಶೊಯೇಬ್ ಟ್ವೀಟ್ ಮಾಡಿದ್ದರು. ಆದರೆ ಫೋಟೋದಲ್ಲಿ ದರ್ಶನ್ ಲಾಲ್ ಬದಲು ಪ್ರಧಾನಿ ಹುಸೈನ್ ಫೋಟೋ ಮಾತ್ರ ಹಾಕಿದ್ದರು.

ಇದಕ್ಕೆ ಕೆಲವು ಅಭಿಮಾನಿಗಳು ಶೊಯೇಬ್ ರನ್ನು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಪಾಕಿಸ್ತಾನದಂತಹ ಪಕ್ಕಾ ಮುಸ್ಲಿಂ ರಾಷ್ಟ್ರವನ್ನು ಜಾತ್ಯಾತೀತ ರಾಷ್ಟ್ರ ಎಂದಿದ್ದಕ್ಕೆ  ಜಾಡಿಸಿದ್ದಾರೆ. ಮತ್ತೆ ಕೆಲವರು ಕ್ರಿಕೆಟ್ ಬಗ್ಗೆ ಮಾತ್ರ ತಲೆಕೆಡಿಸು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ.. ‘ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಂಬರ್ ಒನ್ ಸ್ಥಾನಕ್ಕೇರಿದ ರವೀಂದ್ರ ಜಡೇಜಾ