Publish Date: Tue, 08 Aug 2017 (08:50 IST)
Updated Date: Tue, 08 Aug 2017 (08:52 IST)
ಕೊಲೊಂಬೊ: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿಗೆ ಭಾರೀ ಆರಾಧಕರಿದ್ದಾರೆ. ಆದರೆ ಧೋನಿಯನ್ನು ಅತಿಯಾಗಿ ಹೊಗಳಿದ ಅಭಿಮಾನಿಯನ್ನು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ತಮಾಷೆ ಮಾಡಿದ್ದಾರೆ.
ಉಸೇನ್ ಬೋಲ್ಟ್ ನಿವೃತ್ತಿಯಾದ ಹಿನ್ನಲೆಯಲ್ಲಿ ಅವರಿಗೆ ಗೌರವಪೂರ್ವಕವಾಗಿ ಜಯವರ್ಧನೆ ಉಸೇನ್ ಬೋಲ್ಟ್ ಗೆ ಗೌರವ.. ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಧೋನಿ ಅಭಿಮಾನಿಯೊಬ್ಬರು, ‘ಧೋನಿಗೂ ಗೌರವವಿರಲಿ, ಅವರು ಬೋಲ್ಟ್ ಗಿಂತಲೂ ಫಾಸ್ಟ್’ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜಯವರ್ಧನೆ ‘ಧೋನಿ ತಮ್ಮ ಬೈಕ್ ನಲ್ಲಿ ಫಾಸ್ಟ್ ಇದ್ದಾರಾ?’ ಎಂದು ತಮಾಷೆ ಮಾಡಿದ್ದಾರೆ.