Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿ ಬೆವರಿಳಿಸಿದ ಸೌರವ್ ಗಂಗೂಲಿ

ರವಿಶಾಸ್ತ್ರಿ ಬೆವರಿಳಿಸಿದ ಸೌರವ್ ಗಂಗೂಲಿ
Mumbai , ಭಾನುವಾರ, 6 ಆಗಸ್ಟ್ 2017 (13:06 IST)
ಮುಂಬೈ: ಈಗಿನ ಟೀಂ ಇಂಡಿಯಾ ಮತ್ತು ನಾಯಕ ಕೊಹ್ಲಿಯನ್ನು ಹೊಗಳುವ ಭರದಲ್ಲಿ ಹಳೆಯ ಟೀಂ ಇಂಡಿಯಾ ಆಟಗಾರರನ್ನು ಹೀಗೆಳೆದ ಕೋಚ್ ರವಿಶಾಸ್ತ್ರಿಗೆ ಮಾಜಿ ನಾಯಕ ಸೌರವ್ ಗಂಗೂಲಿ ತಿರುಗೇಟು ನೀಡಿದ್ದಾರೆ.

 
ಈಗಿನ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮಾಡುತ್ತಿರುವ ಸಾಧನೆಯನ್ನು ಹಿಂದಿನ ತಂಡಗಳು ಅತಿರಥ ಮಹಾರಥರಂತಹ ಆಟಗಾರರಿದ್ದೂ ಮಾಡಿಲ್ಲ ಎಂದು ಶಾಸ್ತ್ರಿ ಹೇಳಿದ್ದರು.

ಇದಕ್ಕೆ ಸರಿಯಾಗಿಯೇ ಉತ್ತರ ನೀಡಿರುವ ಗಂಗೂಲಿ ‘ಹಿಂದಿನ ತಂಡ 15 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಗೆದ್ದಿರಲಿಲ್ಲವೇ? ಇಂಗ್ಲೆಂಡ್ ನಲ್ಲಿ ಸರಣಿ ಗೆದ್ದಿರಲಿಲ್ಲವೇ? ರವಿಶಾಸ್ತ್ರಿಯನ್ನು 2019 ರ ವಿಶ್ವಕಪ್ ಗೆ ತಂಡವನ್ನು ಅಣಿಗೊಳಿಸಲು ಆಯ್ಕೆ ಮಾಡಲಾಗಿದೆ. ಅದನ್ನು ಆತ ಸರಿಯಾಗಿ ನಿಭಾಯಿಸಲಿ ಎಂದು ಅವರಿಗೆ ಶುಭ ಹಾರೈಸೋಣ’ ಎಂದು ಗಂಗೂಲಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ.. ‘ರಾಜ್ಯ ಸರ್ಕಾರದ ಅಧೀನದಲ್ಲಿ ಐಟಿ ಇದ್ದಿದ್ದರೆ  ಡಿಕೆಶಿಗೆ ಕ್ಲೀನ್ ಚಿಟ್ ಸಿಗ್ತಿತ್ತು’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅತ್ತ ಕುಂಬ್ಳೆ, ಇತ್ತ ಭಜಿ ದಾಖಲೆಗೆ ಕುತ್ತು ತಂದ ಜಡೇಜಾ-ಅಶ್ವಿನ್ ಜೋಡಿ