Select Your Language

Notifications

webdunia
webdunia
webdunia
webdunia

ಅತ್ತ ಕುಂಬ್ಳೆ, ಇತ್ತ ಭಜಿ ದಾಖಲೆಗೆ ಕುತ್ತು ತಂದ ಜಡೇಜಾ-ಅಶ್ವಿನ್ ಜೋಡಿ

ಅನಿಲ್ ಕುಂಬ್ಳೆ
ಕೊಲೊಂಬೊ: ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಸ್ಪಿನ್ ಜೋಡಿ ಎನಿಸಿಕೊಂಡಿದ್ದ ಅನಿಲ್ ಕುಂಬ್ಳೆ-ಹರ್ಭಜನ್ ಸಿಂಗ್ ಮಾಡುತ್ತಿದ್ದ ಕೆಲಸವನ್ನು ಇದೀಗ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮಾಡುತ್ತಿದ್ದಾರೆ.

 
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ನಿನ್ನೆ ಇನ್ನೊಂದು ಐದು ವಿಕೆಟ್ ಗಳ ಗೊಂಚಲು ಪಡೆದಿದ್ದರು. ಆ ಮೂಲಕ ಐದು ವಿಕೆಟ್ ಗಳ ಗೊಂಚಲು ಪಡೆದ ಹರ್ಭಜನ್ ಸಿಂಗ್ ದಾಖಲೆಯನ್ನು ಹಿಂದಿಕ್ಕಿದರು. ಭಜಿ 25 ಬಾರಿ ಐದು ವಿಕೆಟ್ ಕಿತ್ತಿದ್ದರು. 35 ಬಾರಿ ಈ ಸಾಧನೆ ಮಾಡಿದ ಅನಿಲ್ ಕುಂಬ್ಳೆ ಪ್ರಥಮ ಸ್ಥಾನದಲ್ಲಿದ್ದಾರೆ.

ಇನ್ನೊಂದೆಡೆ ರವೀಂದ್ರ ಜಡೇಜಾ ಎರಡು ವಿಕೆಟ್ ಕೀಳುವುದರ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 150 ವಿಕೆಟ್ ಕಿತ್ತ ಅನಿಲ್ ಕುಂಬ್ಳೆ, ಕಪಿಲ್ ದೇವ್ ದಾಖಲೆಯನ್ನು ಮೀರಿದರು.

ಇದನ್ನೂ ಓದಿ.. ಪ್ರಿಯಾಮಣಿ ಮದುವೆ ಡೇಟ್ ಫಿಕ್ಸ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಮಹಿಳಾ ಕ್ರಿಕೆಟರುಗಳ ಆಸೆ ಪೂರೈಸಿದ ಸೆಹ್ವಾಗ್