Publish Date: Sat, 05 Aug 2017 (12:39 IST)
Updated Date: Sat, 05 Aug 2017 (12:43 IST)
ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡ ಇತ್ತೀಚೆಗೆ ವಿಶ್ವಕಪ್ ನಲ್ಲಿ ನೀಡಿದ ಪ್ರದರ್ಶನದಿಂದಾಗಿ ದೇಶವೇ ಹೆಮ್ಮೆಪಡುವಂತೆ ಮಾಡಿತ್ತು. ಇದೀಗ ಸೆಹ್ವಾಗ್ ಅವರ ಆಸೆ ಪೂರೈಸಿದ್ದಾರೆ.
ಮಹಿಳಾ ಕ್ರಿಕೆಟಿಗರಾದ ಹರ್ಮನ್ ಪ್ರೀತ್ ಸೆಹ್ವಾಗ್ ತಮ್ಮ ಆರಾಧ್ಯ ದೈವ ಎಂದಿದ್ದರು. ಮಹಿಳೆಯರು ವಿಶ್ವಕಪ್ ನಲ್ಲಿ ಆಡುವಾಗ ಸೆಹ್ವಾಗ್ ಆಗಾಗ ಟ್ವೀಟ್ ಮಾಡುತ್ತಾ ಇವರಿಗೆ ಪ್ರೋತ್ಸಾಹ ನೀಡಿದ್ದರು.
ಇದೀಗ ಅದೇ ಹರ್ಮನ್ ಪ್ರೀತ್ ಮತ್ತು ಇತರ ಕೆಲವು ಆಟಗಾರ್ತಿಯರನ್ನು ಖುದ್ದು ಭೇಟಿಯಾಗಿರುವ ಸೆಹ್ವಾಗ್ ಅವರೊಂದಿಗೆ ಫೋಟೋ ತೆಗೆಸಿಕೊಂಡು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಹರ್ಮನ್ ಸೆಹ್ವಾಗ್ ಪಕ್ಕದಲ್ಲೇ ಕೂತು ಪೋಸ್ ನೀಡಿದ್ದು ವಿಶೇಷವಾಗಿದೆ. ಹರ್ಮನ್ ಜತೆಗೆ ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಜೂಲನ್ ಗೋಸ್ವಾಮಿ, ವೇದಾ ಕೃಷ್ಣಮೂರ್ತಿ, ಏಕ್ತಾ ಬಿಶ್ತ್ ಕೂಡಾ ಪೋಸ್ ನೀಡಿದ್ದಾರೆ.
ಈ ಫೋಟೋವನ್ನು ಟ್ವೀಟ್ ಮಾಡಿರುವ ಸೆಹ್ವಾಗ್, ದೇಶವೇ ಹೆಮ್ಮೆಪಡುವಂತೆ ಮಾಡಿದ ಮಹಿಳೆಯರೊಂದಿಗೆ ಪೋಸ್ ನೀಡಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ