Select Your Language

Notifications

webdunia
webdunia
webdunia
webdunia

ಕ್ರಿಕೆಟಿಗ ಶ್ರೀಶಾಂತ್ ಮೇಲೆ ಬಿಸಿಸಿಐ ವಿಧಿಸಿದ್ದ ಅಜೀವ ನಿಷೇಧ ತೆರವು

ಕ್ರಿಕೆಟಿಗ ಶ್ರೀಶಾಂತ್ ಮೇಲೆ ಬಿಸಿಸಿಐ ವಿಧಿಸಿದ್ದ ಅಜೀವ ನಿಷೇಧ ತೆರವು
ಬೆಂಗಳೂರು , ಸೋಮವಾರ, 7 ಆಗಸ್ಟ್ 2017 (15:11 IST)
ಬಿಸಿಸಿಐನಿಂದ ಅಜೀವ ನಿಷೇಧಕ್ಕೊಳಗಾಗಿದ್ದ ಕ್ರಿಕೆಟಿಗ ಎಸ್. ಶ್ರೀಶಾಂತ್`ಗೆ ಕೇರಳ ಹೈಕೋರ್ಟ್ ರಿಲೀಫ್ ನೀಡಿದೆ. ಅಜೀವ ನಿಷೇಧ ತೆರವುಗೊಳಿಸಿ ಹೈಕೋರ್ಟ್ ಆದೇಶಿಸಿದೆ.

2013ರಲ್ಲಿ ಐಪಿಎಲ್ ಸರಣಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಿಲುಕಿದ್ದ ಶ್ರೀಶಾಂತ್, ಬಂಧನಕ್ಕೊಳಗಾಗಿ ಬಳಿಕ ರಿಲೀಸ್ ಆಗಿದ್ದರು. ಬಳಿಕ ಬಿಸಿಸಿಐ ಶ್ರೀಶಾಂತ್`ಗೆ ಕ್ರಿಕೆಟ್`ನಿಂದ ಅಜೀವ ನಿಷೇಧ ಹೇರಿತ್ತು. ಇದನ್ನ ಪ್ರಶ್ನಿಸಿ ಶ್ರೀಶಾಮತ್ ಮಾರ್ಚ್`ನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಶ್ರೀಶಾಂತ್`ಗೆ ರಿಲೀಫ್ ಕೊಟ್ಟಿದೆ. ಬಿಸಿಸಿಐ ನಿಷೇಧ ಆದೇಶವನ್ನ ವಜಾ ಮಾಡಿದೆ.

ಶ್ರೀಶಾಂತ್ ವಿರುದ್ಧದ ನಿಷೇಧ ವಜಾಗೊಂಡರೂ ಸಹ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡುವುದು ಕಷ್ಟ ಸಾಧ್ಯ. ಶ್ರೀಶಾಂತ್ ಅವರಲ್ಲಿ ಈ ಹಿಂದಿನ ಆಟದ ಖದರ್ ಉಳಿದಿಲ್ಲ. ಜೊತೆಗೆ ಕ್ರಿಕೆಟ್`ನಿಂದ ಹಲವು ವರ್ಷಗಳಿಂದ ದೂರವೇ ಇರುವ ಶ್ರೀಶಾಂತ್ ಚಿತ್ರರಂಗದಲ್ಲೂ ತೊಡಗಿಕೊಂಡಿದ್ದಾರೆ. ಆದರೆ, ಶ್ರೀಶಾಂತ್ ಐಪಿಎಲ್`ನಲ್ಲಿ ಗಮನ ಸೆಳೆಯಬಹುದು. ಇದೇ ಪ್ರಕರಣದಲ್ಲಿ ನಿಷೆಧಕ್ಕೊಳಗಾಗಿದ್ದ ಚೆನ್ನೈ, ರಾಜಸ್ಥಾನ ತಂಡಗಳು ಸಹ ಮುಂದಿನ ವರ್ಷ ಐಪಿಎಲ್`ಗೆ ಎಂಡ್ರಿ ಕೊಡುತ್ತಿದ್ದು, ಶ್ರೀಶಾಂತ್ ಅವಕಾಶ ಗಿಟ್ಟಿಸಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾತು ಕೇಳದ ಗಂಗೂಲಿ ಮೇಲೆ ಸಿಟ್ಟಿಗೆದ್ದಿದ್ದರೇ ಸಚಿನ್?