Select Your Language

Notifications

webdunia
webdunia
webdunia
webdunia

ಶಾರುಖ್ ಸಿನಿಮಾ ನೋಡ್ತಿದ್ದೇನೆ ಕಾಪಾಡಿ ಎಂದು ಸಚಿವೆ ಸುಷ್ಮಾಗೆ ಟ್ವೀಟ್ ಮಾಡಿದ ಭೂಪ

ಶಾರುಖ್ ಸಿನಿಮಾ ನೋಡ್ತಿದ್ದೇನೆ ಕಾಪಾಡಿ ಎಂದು ಸಚಿವೆ ಸುಷ್ಮಾಗೆ ಟ್ವೀಟ್ ಮಾಡಿದ ಭೂಪ
NewDelhi , ಮಂಗಳವಾರ, 8 ಆಗಸ್ಟ್ 2017 (08:37 IST)
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಸಾರ್ವಜನಿಕರು ಮಾಡುವ ಮನವಿಗೆ ತಕ್ಷಣ ಸ್ಪಂದಿಸುವವರು ಎಂದು ಅವರನ್ನು ಎಲ್ಲರೂ ಹೊಗಳುತ್ತಾರೆ.

 
ಆದರೆ ಅವರ ಇದೇ ಒಳ್ಳೆತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸುಳ್ಳಲ್ಲ. ಅಂತಹದ್ದೇ ಒಂದು ಪ್ರಕರಣ ನಡೆದಿದೆ. ಪುಣೆಯ ಸಿನಿಮಾ ಥಿಯೇಟರ್ ಒಂದರಲ್ಲಿ ಶಾರುಖ್ ಖಾನ್ ಅಭಿನಯದ ಜಬ್ ಹ್ಯಾರಿ ಮೆಟ್ ಸೆಜಾಲೋ ಸಿನಿಮಾ ನೋಡುತ್ತಿದ್ದ ವಿಶಾಲ್ ಸೂರ್ಯವಂಶಿ ಎಂಬಾತ ಸಚಿವೆ ಸುಷ್ಮಾಗೆ ಟ್ವೀಟ್ ಮಾಡಿದ್ದಾನೆ.

‘ಮೇಡಂ ಶಾರುಖ್ ಖಾನ್ ಅಭಿನಯದ ‘ಜಬ್ ಹ್ಯಾರಿ ಮೆಟ್ ಸೆಜಾಲೋ’ ಸಿನಿಮಾವನ್ನು ಪುಣೆಯ ಕ್ಸಿಯೋನ್ ಸಿನೆಮಾ ಥಿಯೇಟರ್ ನಲ್ಲಿ ನೋಡುತ್ತಿದ್ದೇನೆ. ದಯವಿಟ್ಟು ತಕ್ಷಣ ನನ್ನನ್ನು ಕಾಪಾಡಿ’ ಎಂದು ಟ್ವೀಟ್ ಮಾಡಿದ್ದಾನೆ.

ಇದಕ್ಕೆ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಟ್ವೀಟ್ ಮಾತ್ರ ಭಾರೀ ಲೈಕ್ಸ್ ಪಡೆದಿದೆ. ಹಿಂದೊಮ್ಮೆ ವ್ಯಕ್ತಿಯೊಬ್ಬ ಸುಷ್ಮಾಗೆ ರೆಫ್ರಿಜರೇಟರ್ ರಿಪೇರಿ  ಮಾಡಿಸಿಕೊಡಿ ಎಂದು ಟ್ವೀಟ್ ಮಾಡಿದ್ದ. ಇದಕ್ಕೆ ಸಹೋದರ ಇದು ನನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲ. ನನಗೆ ಮನುಷ್ಯರ ಹಲವು ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದು ಉತ್ತರಿಸಿದ್ದರು.

ಇದನ್ನೂ ಓದಿ.. ವಿವಾದಕ್ಕೆಡೆ ಮಾಡಿದ ಜಗ್ಗೇಶ್ ಟ್ವೀಟ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಆನಂದ್ ಆಸ್ನೋಟಿಕರ್‌ಗೆ ಜೆಡಿಎಸ್ ಗಾಳ