ಬೆಂಗಳೂರು : ಇಲ್ಲಿಯವರೆಗೂ ವಿಶ್ವಾಸಮತಯಾಚಿಸದ ಮೈತ್ರಿ ಸರ್ಕಾರ ಲಜ್ಜೆಗೆಟ್ಟ ಸರ್ಕಾರ ಎಂದು ಯಲಹಂಕ ಶಾಸಕ ಎಸ್. ಆರ್ ವಿಶ್ವನಾಥ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
									
										
								
																	
ರಮಡ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತರು ಬರೋ ಹಾಗಿದ್ದರೆ ಕರೆದುಕೊಂಡು ವಿಶ್ವಾಸ ಮತ ಯಾಚನೆ ಮಾಡಲಿ. ಆದರೆ ಕಾಲಹರಣ ಮಾಡೋದು ಸರಿ ಇಲ್ಲ. ಸ್ಪೀಕರ್ ಸೋಮವಾರ ಮತಯಾಚನೆ ಮಾಡಿ ಎಂದು ಹೇಳಿದ್ದಾರೆ. ಅವರ ಮಾತಿನ ಮೇಲೆ ನಮಗೆ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
									
			
			 
 			
 
 			
			                     
							
							
			        							
								
																	
ಅತೃಪ್ತರನ್ನ ಮನವೊಲಿಸ್ತಾರೋ ಏನು ಮಾಡ್ತಾರೋ ನಮಗೆ ಗೊತ್ತಿಲ್ಲ. ಆದರೆ ವಿಶ್ವಾಸ ಮತ ಯಾಚನೆ ಮಾಡಿ. ಈ ಆಟಗಳನ್ನೆಲ್ಲ ಜನ ನೋಡುತ್ತಿದ್ದಾರೆ. ನೈತಿಕತೆ ಇದ್ರೆ ವಿಶ್ವಾಸ ಮತಯಾಚನೆ ಮಾಡಿ. ಹೀಗೆ ಕಲಾಪ ಮುಂದೂಡಿದಂತೆ ಕಾಂಗ್ರೆಸ್, ಜೆಡಿಎಸ್ ನಿಂದ ಇನ್ನಷ್ಟು ಶಾಸಕರು ಓಡಿಹೋಗಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.