Select Your Language

Notifications

webdunia
webdunia
webdunia
webdunia

ಮೈತ್ರಿ ಪಕ್ಷಗಳ 13 ಶಾಸಕರ ರಾಜೀನಾಮೆ ವದಂತಿ ವಿಚಾರ ಕೇವಲ ಬ್ಲ್ಯಾಕ್ ಮೇಲ್ ತಂತ್ರ- ಸ್ಪೀಕರ್ ರಮೇಶ್ ಕುಮಾರ್

webdunia
ಶನಿವಾರ, 6 ಜುಲೈ 2019 (13:19 IST)
ಬೆಂಗಳೂರು : ಮೈತ್ರಿ ಪಕ್ಷಗಳ 13 ಶಾಸಕರ ರಾಜೀನಾಮೆ ವದಂತಿ ವಿಚಾರ ಇದು ಕೇವಲ ಬ್ಲ್ಯಾಕ್ ಮೇಲ್ ತಂತ್ರ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 13 ಶಾಸಕರ ರಾಜೀನಾಮೆ ವಿಚಾರ ಬರೀ ಪುಕಾರು, ಇದು ಕೇವಲ ಬ್ಲ್ಯಾಕ್ ಮೇಲ್ ತಂತ್ರ. ಈವರೆಗೆ ಯಾವುದೇ ಶಾಸಕರು ನನ್ನನ್ನು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.


ಶಾಸಕರು ಬ್ಯುಸಿನೆಸ್ ಮಾಡಿಕೊಳ್ಳಲು ಮಾಡ್ತಿರುವ ತಂತ್ರ. ನಾನು ಸಂತೆಯಲ್ಲಿ ಕುಳಿತಿಲ್ಲ, ಸ್ಪೀಕರ್ ಭೇಟಿಗೂ ಒಂದು ಕ್ರಮವಿದೆ. ನನ್ನನ್ನು ಭೇಟಿಯಾಗೋಕೆ ಯಾರೂ ಸಮಯ ಕೇಳಿಲ್ಲ. 13 ಅಲ್ಲ, 30 ಜನರು ಬೇಕಾದರೆ ಸ್ಪೀಕರ್ ಕಚೇರಿಗೆ ಬರಲಿ ಎಂದು ಅವರು ತಿಳಿಸಿದ್ದಾರೆ.


Share this Story:

Follow Webdunia Hindi

ಮುಂದಿನ ಸುದ್ದಿ

‘ಫೀ ತುಂಬಿಲ್ಲ ಅಂತ ಮಕ್ಕಳನ್ನು ಶಾಲೆಯಿಂದ ಹೊರಹಾಕುವಂತಿಲ್ಲ’